ಮಂಗಳೂರು: ಆಸ್ತಿ ವಿವಾದಕ್ಕೆ ಸೋದರನ ಹತ್ಯೆ, ಆರೋಪಿ ಬಂಧನ

ಮಂಗಳೂರು: ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ವರದಿಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮಂಗಳೂರು: ಮಂಗಳೂರು: ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ವರದಿಯಾಗಿದೆ.

ಮಂಗಳೂರು ತಾಲೂಕಿನ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲಾರಿ ಮಸೀದಿ ಸಮೀಪ ಈ ಘಟನೆ ನಡೆದಿದೆ.

ಬೆಂಗ್ರೆ ನಿವಾಸಿ ಮುಸ್ತಾಪ ಕೊಲೆಯಾದ ವ್ಯಕ್ತಿ. ಮೃತ ಮುಸ್ತಫಾನ ಸಹೋದರ ರೈಜು ಯಾನೆ ಅಬ್ದುಲ್ ರಹಮಾನ್ ಕೊಲೆ ಆರೋಪಿ ಎಂದು ಹೇಳಲಾಗಿದೆ. ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.ತಾಯಿ ಹಾಗೂ ತಂಗಿಗೆ ಅಬ್ದುಲ್ ಮನೆ ವಿಚಾರವಾಗಿ ಹಿಂಸಿಸುತ್ತಿದ್ದನೆಂದೂ ಆರೋಪಿಸಲಾಗಿದೆ.

ನಿನ್ನೆ ರಾತ್ರಿ ಸಹ ಜಗಳವಾಗಿದ್ದು ಆ ವೇಳೆ ಆರೋಪಿ ಅಬ್ದುಲ್ ಮುಸ್ತಾಪ ನಿಗೆ ಚಾಕುವಿನಿಂದ ಇರಿದಿದ್ದಾನೆ. ಆ ವೇಳೆ ತಾಯಿ ಹಾಗೂ ಭಾವ ಜಗಳ ಬಿಡಿಸಲು ಮುಂದಾಗಿದ್ದರೂ ಸಾಧ್ಯವಾಗಿಲ್ಲ. ಇರಿತದಿಂದ ಗಂಭೀರ ಗಾಯಗೊಂಡಿದ್ದ ಮುಸ್ತಾಪ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಘಟನೆ ಸಂಬಂಧ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com