ಕಲಬುರಗಿ: ಮಹಿಳೆಯೊಬ್ಬರು ರೈಲು ಹಳಿ ದಾಟುವಾಗ, ಗೂಡ್ಸ್ ರೈಲು ಬಂದಿದ್ದರಿಂದ ಹಳಿಯಲ್ಲೇ ಮಲಗಿ
ಉಪಾಯದಿಂದ ಪ್ರಾಣ ರಕ್ಷಿಸಿಕೊಂಡಿರುವ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇಂದು ನಡೆದಿದೆ.
ಪಟ್ಟಣದ ನಿವಾಸಿ ಮಾನಿಬಾಯಿ ಚಂದರ್ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಮಹಿಳೆ. ರೈಲು ಹಳಿ ದಾಟುವಾಗಿ
ಏಕಾಏಕಿ ಗೂಡ್ಸ್ ರೈಲು ಆಗಮಿಸಿದೆ. ಆಗ ದಿಕ್ಕು ತೋಚದೆ ತಕ್ಷಣ ಹಳಿಯ ಮಧ್ಯೆ ಮುದುಡಿಕೊಂಡು ಮಲಗಿದ್ದಾರೆ.
ಇದನ್ನು ನೋಡಿದ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.
ಆದರೆ, ರೈಲು ಹೋಗುವವರೆಗೂ ಹಾಗೆಯೇ ಮುದುಡಿಕೊಂಡಿದ್ದ ಮಹಿಳೆ ಎಲ್ಲಾ ಬೋಗಿಗಳು ಚಲಿಸಿದ ಬಳಿಕ ನಿಧಾನವಾಗಿ ಎದ್ದು
ಬಂದಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಆಶ್ಚರ್ಯ ಚಕಿತರಾಗಿದ್ದಾರೆ. ಕೆಲವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement