ಬೆಂಗಳೂರು: ಮಣಿಪಾಲ್ ಸಂಸ್ಥೆ ಮಾಲೀಕರಿಗೆ ರೂ.62 ಕೋಟಿ ವಂಚನೆ, 4 ಬಂಧನ

ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ.ರಂಜನ್ ಪೈ ದಂಪತಿಗೆ ನಂಬಿಕೆ ದ್ರೋಹ ಮಾಡಿ ರೂ.62 ಕೋಟಿ ವಂಚಿಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ.ರಂಜನ್ ಪೈ ದಂಪತಿಗೆ ನಂಬಿಕೆ ದ್ರೋಹ ಮಾಡಿ ರೂ.62 ಕೋಟಿ ವಂಚಿಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 
ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಆತನ ಪತ್ನಿ ಸೇರಿ ನಾಲ್ವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಚಿಕ್ಕಲಸಂದ್ರದ ನಿವಾಸಿ ಸಂದೀಪ್ ಗುರು ರಾಜ್, ಆತನ ಪತ್ನಿ ಪಿ.ಎನ್.ಚಾರುಸ್ಮಿತಾ, ಮುಂಬೈನ ಅಮ್ರಿತಾ ಚೆಂಗಪ್ಪ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸಂದೀಪ್ ಸ್ನೇಹಿತ ಕತಾರ್ ಏರ್ ವೆಸ್ ಪೈಲೆಟ್ ವಿಶಾಲ್ ಸೋಮಣ್ಣ ಪತ್ತೆಗೆ ತನಿಖೆ ಮುಂದುವರೆದಿದ್ದು, ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. 
ವಂಚನೆ ಹಣದಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಖರೀದಿಸಿದ್ದ ನಿವೇಶನ, ಫ್ಲ್ಯಾಟ್ ಗಳ ದಾಖಲೆಗಳು, ಎರಡು ಕಾರು ಹಾಗೂ ರೂ.1.81ಕೋಟಿ ನಗರು ಸೇರಿದಂತೆ ರೂ.4 ಕೋಟಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. 
ಇತ್ತೀಚೆಗೆ ತಮ್ಮ ಸಂಸ್ಥೆ ಅಧ್ಯಕ್ಷ ಖಾತೆಯಿಂದ ಸಂದೀಪ್, ತನ್ನ ಗೆಳೆಯ ವಿಶಾಲ್ ಸೋಮಣ್ಣನ ಖಾತೆಗೆ ಮೇಲಿಂದ ಮೇಲೆ 2 ಬಾರಿ ರೂ.3.5 ಕೋಟಿ ಹಣ ವರ್ಗಾಯಿಸಿದ್ದ. ಈ ವೇಳೆ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು, ರಂಜನ್ ಪೈ ಅವರನ್ನು ಸಂಪರ್ಕಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ರಂಜನ್ ಅವರೂ ಸೂಚನೆ ಮೇರೆಗೆ ಮಣಿಪಾಲ್ ಶಿಕ್ಷಣ ಸಂಸ್ಥೆಯ ಅಧಿಕಾರಿ ನೀಡಿದ ದೂರಿನ ಮೇರೆಗೆ ಸಂದೀಪ್ ಹಾಗೂ ಆತನ ತಂಡದ ಸದಸ್ಯರನ್ನು ಬಂಧಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com