ಬೆಂಗಳೂರು ಮಾಲ್‌ನಲ್ಲಿ ರಾಷ್ಟ್ರಗೀತೆ ಬಗ್ಗೆ ಬೈಗುಳ, ಅಗೌರವ, ವ್ಯಕ್ತಿ ಬಂಧನ!

ಗರುಡ ಮಾಲ್‌ನಲ್ಲಿ ಚಿತ್ರದ ಪ್ರದರ್ಶನಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಂತು ಗೌರವ ನೀಡದ ವ್ಯಕ್ತಿಯನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಗರುಡ ಮಾಲ್‌ನಲ್ಲಿ ಅವೆಂಜರ್ಸ್ ಎಂಡ್‌ಗೇಮ್‌ ಚಿತ್ರದ ಪ್ರದರ್ಶನಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಂತು ಗೌರವ ನೀಡದ ವ್ಯಕ್ತಿಯನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.
29 ವರ್ಷದ ಜಿತಿನ್ ಬಂಧಿತ ವ್ಯಕ್ತಿ ಸಂಜಯ್ ನಗರದಲ್ಲಿ ವಾಸವಾಗಿದ್ದು ಎರಡು ವರ್ಷಗಳ ಹಿಂದೆ ಈತ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದು ಸಿನಿಮಾ ಯೋಜನೆಯೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾನೆ. ಜಿತಿನ್ ವಿರುದ್ಧ ಸುಮನ್ ಕುಮಾರ್ ಎಂಬುವರು ದೂರು ದಾಖಲಿಸಿದ್ದಾರೆ ಎಂದು ಅಶೋಕನಗರ ಪೊಲೀಸರು ತಿಳಿಸಿದ್ದಾರೆ. 
ಸುಮನ್ ತನ್ನ ಸ್ನೇಹಿತ ಜೊತೆ ಚಿತ್ರ ನೋಡಲು ಹೋಗಿದ್ದಾಗ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಿತ್ತು. ಈವೇಳೆ ನಾವೆಲ್ಲ ಎದ್ದು ಗೌರವ ಸಲ್ಲಿಸುತ್ತಿದ್ದೇವು. ಆಗ ಜಿತಿನ್ ಕುಳಿತುಕೊಂಡಿದ್ದ. ನಾನು ಯಾಕೆ ನೀನು ಕುಳಿತುಕೊಂಡಿದ್ದೀಯಾ ಎಂದು ಪ್ರಶ್ನಿಸಿದೆ. ಅದಕ್ಕೆ ಆತ ರಾಷ್ಟ್ರಗೀತೆ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ ಅಲ್ಲದೇ ನನಗೂ ಕೆಟ್ಟ ಭಾಷೆ ಬಳಸಿ ಬೈದ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಕೂಡಲೇ ಸುಮನ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಮಾಲ್ ಗೆ ಬಂದ ಪೊಲೀಸರು ಜಿತಿನ್ ನನ್ನು ಬಂಧಿಸಿದ್ದು ಆತನ ವಿರುದ್ಧ ರಾಷ್ಟ್ರೀಯ ಗೌರವ ಕಾಯ್ದೆಯಡಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com