ಅಕ್ರಮ ವಲಸಿಗರ ವಿರುದ್ಧ ಸಿಸಿಬಿ ಕಾರ್ಯಾಚರಣೆ: 30 ಬಾಂಗ್ಲಾದೇಶಿ ವಲಸಿಗರ ಬಂಧನ

ಅಪರಾಧ ಹಾಗೂ ಉಗ್ರ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಶಂಕೆಯ ಮೇರೆಗೆ ರಾಜಧಾನಿಯಲ್ಲಿ ನೆಲೆಯೂರಿರುವ ಅಕ್ರಮ ಬಾಂಗ್ಲಾದೇಶ ವಲಸಿಗರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ನಗರದ ವಿವಿಧೆಡೆ ನೆಲೆಸಿದ್ದ ಮಹಿಳೆಯರು ಸೇರಿದಂತೆ 30 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಪರಾಧ ಹಾಗೂ ಉಗ್ರ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಶಂಕೆಯ ಮೇರೆಗೆ ರಾಜಧಾನಿಯಲ್ಲಿ ನೆಲೆಯೂರಿರುವ ಅಕ್ರಮ ಬಾಂಗ್ಲಾದೇಶ ವಲಸಿಗರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ನಗರದ ವಿವಿಧೆಡೆ ನೆಲೆಸಿದ್ದ ಮಹಿಳೆಯರು ಸೇರಿದಂತೆ 30 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ. 

ಇದೇ ವೇಳೆ ಮೊದಲ ಬಾರಿಗೆ ಅಕ್ರಮ ಬಾಂಗ್ಲಾ ವಲಸಿಗರನ್ನು ನಗರಕ್ಕೆ ಕರೆತರುತ್ತಿದ್ದ ಜಾಲವನ್ನೂ ಕೂಡ ಸಿಸಿಬಿ ಬೇಧಿಸಿದ್ದು, ಇಬ್ಬರು ದಲ್ಲಾಳಿಗಳು ಖಾಕಿ ಬಲೆಗೆ ಬಿದ್ದಿದ್ದಾರೆಂದು ವರದಿಗಳು ತಿಳಿಸಿವೆ. 

ರಾಮಮೂರ್ತಿ ನಗರ, ಬೆಳ್ಳಂದೂರು ಹಾಗೂ ಮಾರತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮಹಿಳೆಯರು, ಪುರುಷರು ಸೇರಿ ಒಟ್ಟು 30 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಪ್ರಸ್ತುತ ವಶಕ್ಕೆ ಪಡೆದಿರುವ ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಗಡೀಪಾರು ಮಾಡುವಂತೆ ವಿದೇಶಿ ನೋಂದಣಾಧಿಕಾರಿ ಕಚೇರಿಗೆ ವರದಿ ಕಳುಹಿಸಲಾಗುತ್ತದೆ ಎಂದು ಪೊಲೀಸು ಮಾಹಿತಿ ನೀಡಿದ್ದಾರೆ. 

ಇತ್ತೀಚೆಗೆ ಬಾಂಗ್ಲಾದೇಶದ ನಿಷೇಧಿತ ಸಂಗಟನೆ ಜಮಾತ್-ಉಲ್-ಮುಜಾಹಿದ್ದೀನ್'ನ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ. ನಗರದ 20 ಕಡೆಗಳಲ್ಲಿ ಜೆಎಂಬಿ ನೆಲೆ ಪತ್ತೆಯಾಗಿದೆ. ಎಂದು ರಾಷ್ಟ್ರೀಯ ತನಿಖಾ ದಳದ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದರು. ಎನ್ಐಎ ವರದಿ ಹಿನ್ನಲೆಯಲ್ಲಿ ಎಚ್ಚೆತ್ತ ಸಿಸಿಬಿ, ರಾಜಧಾನಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆಗೆ ನಿರ್ಧಱಿಸಿದ್ದರು. ಅದರೆ, ಕೆಲ ದಿನಗಳಿಂದ ವಲಸೆ ಹಕ್ಕಿಗಳ ನೆಲೆಗಳ ಮೇಲೆ ನಿಗಾವಹಿಸಿದ್ದ ಸಿಸಿಬಿ, ಅಲ್ಲಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಕರೆ ಹಾಕಿ ದಾಳಿಯ ರೂಪರೇಷೆ ಸಿದ್ಫಡಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com