ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ಹೆಚ್ ಆರ್ ಡಿಯ ಜಂಟಿ ಕಾರ್ಯದರ್ಶಿ ಡಾ. ಗಿರಿಶ್ ಹೊಸೂರ್ ಅಧಿಕಾರ ಸ್ವೀಕಾರ

ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ಹೆಚ್ ಆರ್ ಡಿಯ ಜಂಟಿ ಕಾರ್ಯದರ್ಶಿ ಡಾ. ಗಿರಿಶ್ ಹೊಸೂರ್ ಅಧಿಕಾರ ಸ್ವೀಕಾರ
ವಿಧಾನಸೌಧ
ವಿಧಾನಸೌಧ
Updated on: 

ಬೆಂಗಳೂರು: ಮುಖ್ಯ ಮಂತ್ರಿಯವರ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಗಿರೀಶ್ ಸಿ ಹೊಸೂರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಕೇಂದ್ರ ಸರ್ಕಾರದ ‌ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಮುಖ್ಯಮಂತ್ರಿಯವರ ಕಾರ್ಯದರ್ಶಿ ಯಾಗಿ ನೇಮಕವಾಗಲು ಕರ್ತವ್ಯದಿಂದ ಬಿಡುಗಡೆ ಮಾಡಿದೆ.

ದೆಹಲಿಯ ಜೆಎನ್ ಯು , ಜಮಿಯಾ ಮಿಲಿಯಾ, ದೆಹಲಿ‌ ವಿಶ್ವವಿದ್ಯಾಲಯ, ಅಲಹಾಬಾದ್ , ಮಣಿಪುರ ವಿಶ್ವವಿದ್ಯಾಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ‌ಹಾಗೂ‌ ಇತರ ಪ್ರತಿಭಟನೆಯನ್ನು‌ ಸಕ್ರಿಯವಾಗಿ ಶಮನಗೊಳಿಸಿ , ಗುಣಾತ್ಮಕ ಶಿಕ್ಷಣಕ್ಕಾಗಿ ಗಣನೀಯವಾಗಿ  ಸೇವೆಸಲ್ಲಿಸಿದ್ದಾರೆ. ಹೊಸ ಶಿಕ್ಷಣ‌ನೀತಿ ರೂಪಿಸುವಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com