ಕೊರೋನಾ ಎಫೆಕ್ಟ್: 10 ಮಂದಿಯಲ್ಲಿ ವೈರಸ್ ಪತ್ತೆ, ನಗರದ ಪಾದರಾಯನಪುರ ಸಂಪೂರ್ಣ ಸೀಲ್

ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪಾದರಾಯನಪುರದಲ್ಲಿ 10 ಮಂದಿ ಸೋಂಕಿತ ವ್ಯಕ್ತಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಶುಕ್ರವಾರ ಸಂಪೂರ್ಣ ಸೀಲ್ ಮಾಡಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪಾದರಾಯನಪುರದಲ್ಲಿ 10 ಮಂದಿ ಸೋಂಕಿತ ವ್ಯಕ್ತಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಶುಕ್ರವಾರ ಸಂಪೂರ್ಣ ಸೀಲ್ ಮಾಡಲಾಗಿದೆ. 

ಇಂದು ಬೆಳಿಗ್ಗೆ 10 ಗಂಟೆಯಿಂದ ಈ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದು, ಈ ಪ್ರದೇಶದಲ್ಲಿರುವ ಜನರು ಮನೆಗಳಿಂದ ಯಾರೂ ಹೊರಬರದಂತೆ ಹಾಗೂ ಒಳಗೆ ಹೋಗದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಈಗಾಗಲೇ ಈ ಪ್ರದೇಶವನ್ನು ಸಂಪರ್ಕಿಸುವ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಬ್ಯಾರಿಕೇಡ್, ಟೇಪ್ ಹಾಗೂ ಮರದ ದಿಣ್ಣೆಗಳನ್ನು ಇಟ್ಟು ಮುಚ್ಚಲಾಗಿದೆ. 

ಈ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರ ಬರುವಂತಿಲ್ಲ. ಪಡಿತರ, ಹಣ್ಣು-ತರಕಾರಿ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಗಿದ್ದು, ಜನರಿಗೆ ಬಿಬಿಎಂಪಿ ಸಿಬ್ಬಂದಿಗಳೇ ದಿನಸಿ, ತರಕಾರಿ ಹಾಗೂ ಇನ್ನಿತರೆ ಅಗತ್ಯ ವಸ್ತುಗಳನ್ನು ಒದಗಿಸಲಿದ್ದಾರೆ. ಕೊರೋನಾ ಸೋಂಕು ಹರಡುವದನ್ನು ತಪ್ಪಿಸರು ಸರ್ಕಾರ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. 

ಸೀಲ್ ಆಗಿರುವ ಪ್ರದೇಶದಲ್ಲಿ ಸ್ಥಳೀಯಾಡಳಿತ ಅಧಿಕಾರಿಗಳು, ಪೊಲೀಸರು, ಆರೋಗ್ಯಾಧಿಕಾರಿಗಲು ಮಾತ್ರ ಓಡಾಡಲು ಅವಕಾಶವಿದೆಯ ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಹಾಗೂ ಸಾರ್ವಜನಿಕರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಪ್ರದೇಶದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವುದರಿಂದ, ಅರ್ಧ ಅರ್ಧ ಕಿಲೋ ಮೀಟರ್'ಗೂ ಭದ್ರತೆಯನ್ನು ನೀಡಲಾಗಿದೆ. 8 ಮಂದಿ ಪ್ರಾಥಮಿಕ ಹಾಗೂ ಇಬ್ಬರು ಪರೋಕ್ಷ ಸಂಪರ್ಕ ಹೊಂದಿರುವ ವ್ಯಕ್ತಿಗಳು ಇಲ್ಲಿದ್ದಾರೆ. ಈಗಾಗಲೇ ಅವರನ್ನು ಹುಡುಕಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com