ಏ.14ರಿಂದ ಜನರ ಮನೆ ಬಾಗಿಲಿಗೇ ಬರಲಿದೆ ಅಗತ್ಯ ವಸ್ತುಗಳು!

ಕತ್ರಗುಪ್ಪೆ ಸಂಪೂರ್ಣವಾಗಿ ಸೀಲ್ ಆದ ಬಳಿಕ ಅಲ್ಲಿನ 1,200 ನಿವಾಸಿಗಳ ಮನೆಗಳ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದ ಬಿಬಿಎಂಪಿಗೆ ಇದೀಗ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇದರಂತೆ ಏಪ್ರಿಲ್ 14ರಿಂದ ಬೆಂಗಳೂರಿನ ಎಲ್ಲಾ ಭಾಗದ ನಿವಾಸಿಗಳ ಮನೆಬಾಗಿಲಿಗೂ ಅಗತ್ಯ ವಸ್ತುಗಳನ್ನು ತಲುಪಿಸಲು ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕತ್ರಗುಪ್ಪೆ ಸಂಪೂರ್ಣವಾಗಿ ಸೀಲ್ ಆದ ಬಳಿಕ ಅಲ್ಲಿನ 1,200 ನಿವಾಸಿಗಳ ಮನೆಗಳ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದ ಬಿಬಿಎಂಪಿಗೆ ಇದೀಗ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇದರಂತೆ ಏಪ್ರಿಲ್ 14ರಿಂದ ಬೆಂಗಳೂರಿನ ಎಲ್ಲಾ ಭಾಗದ ನಿವಾಸಿಗಳ ಮನೆಬಾಗಿಲಿಗೂ ಅಗತ್ಯ ವಸ್ತುಗಳನ್ನು ತಲುಪಿಸಲು ನಿರ್ಧರಿಸಿದೆ. 

ಈ ಕುರಿತು ಬಿಬಿಎಂಪಿ ಆಯುಕ್ತ ಬಿ.ಹೆಚ್,ಅನಿಲ್ ಕುಮಾರ್ ಹಾಗೂ ಬೆಂಗಳೂರು ದಕ್ಷಿಣ ವಲಯ ಸಂಸದ ತೇಜಸ್ವಿ ಸೂರ್ಯ ಅವರು ಸಬೆ ನಡೆಸಿ ಮಾತುಕತೆ ನಡೆಸಿದ್ದಾರೆ. 

ಇದರಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ ಅವರು, ಉತ್ತರ ಭಾರತದ ದೆಹಲಿ ಮತ್ತು ನೊಯ್ಡಾ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಸನ್ನು ಸೀಲ್ ಮಾಡಲಾಗಿದೆ. ಅದರಂತೆಯೇ ನಾವು ಕೂಡ ರಾಜ್ಯದಲ್ಲಿರುವ ಹಲವು ಪ್ರದೇಶಗಳನ್ನು ಸೀಲ್ ಮಾಡುವ ಅಗತ್ಯವಿದೆ. ಸೀಲ್ ಆದ ಪ್ರದೇಶಗಳಲ್ಲಿ ಜನರಿಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ನಾವು ಸಂಪರ್ಕಿಸಲು 080-61914960 ಸಂಖ್ಯೆ ನೀಡಿದ್ದೇವೆ. ಜನರು ಈ ಸಂಖ್ಯೆಗೆ ಕರೆ ಅಥವಾ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಿದರೆ, ನಾವು ವಸ್ತುಗಳನ್ನು ಪೂರೈಕೆ ಮಾಡುತ್ತೇವೆ. 

ಈ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸಕ್ತಿ ತೋರಿಸಿದ್ದು, ಒಪ್ಪಿಗೆ ನೀಡಿದ್ದಾರೆಂದು ತಿಳಿದುಬಂದಿದೆ. 

ಬಿಬಿಎಪಿ ಆಯುಕ್ತರು ಮಾತನಾಡಿ, ಸಂಸದರು ತಮ್ಮದೇ ನೇತೃತ್ವದಲ್ಲಿ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಇದೀಗ ಬಿಬಿಎಂಪಿ ಕೂಡ ಈ ಕಾರ್ಯವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com