

ಮೈಸೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಪೈಕಿ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ಪತ್ತೆಯಾಗಿದೆ. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಒಟ್ಟು 41 ಜನರು ಈ ಮಾರಕ ವೈರಸ್‌ನಿಂದ ಬಾಧಿತರಾಗಿದ್ದಾರೆ.
ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರು ಪ್ರತ್ಯೇಕ ದ್ವೀಪದಂತಾಗಿ ಮಾರ್ಪಟ್ಟಿದೆ. ಜಿಲ್ಲೆ. ಸುತ್ತಮುತ್ತಲ ಗಡಿಗಳನ್ನು ಮುಚ್ಚಲಾಗಿದೆ. ಚಾಮರಾಜನಗರದಲ್ಲಿ ಒಂದು ಪಾಸಿಟಿವ್ ಕೇಸ್ ಉಲ್ಲ, ಮತ್ತು ಕೊಡಗು ಕೂಡ ಹೀಗೆ ಇದೆ, ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಮೈಸೂರಿನಿಂದ ಜನರು ತಮ್ಮ ಜಿಲ್ಲೆಗಳಿಗೆ ಪ್ರವೇಶಿಸುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.
ಮೈಸೂರಿನ ಜನತೆ ಅನುಮಾನ ಮತ್ತು ಭಯದಿಂದ ಬದುಕುವಂತಾಗಿದೆ. ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಮತ್ತು ಆರೋಗ್ಯ ಇಲಾಖೆ ಯಾವುದೇ ಮನವಿಗೆ ಸ್ಪಂದಿಸುತ್ತಿಲ್ಲ. ತೀರಾ ಎಮರ್ಜೆನ್ಸಿ ಇರುವವರಿಗೆ ಮಾತ್ರ ಚೆಕ್ ಪೋಸ್ಟ್ ಗಳಲ್ಲಿ ಅನುಮತಿ ನೀಡುತ್ತಿದ್ದಾರೆ.
ಲಾಕ್‌ಡೌನ್, ಕರೋನ ವೈರಸ್‌ನ ಶೀಘ್ರ ಹರಡುವಿಕೆಯ ಭಯದಿಂದ, 30 ಲಕ್ಷ ಜನಸಂಖ್ಯೆಯಿರುವ ಮೈಸೂರು ಜಿಲ್ಲೆಯನ್ನು ಭೂತ ಪ್ರದೇಶವನ್ನಾಗಿ ಮಾಡುತ್ತಿದೆ. ಕೊರೋನಾ ವೈರಸ್ ಜನತೆಯನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ನಂಜನಗೂಡಿನ ಔಷಧಿ ಕಂಪನಿ ಸಿಬ್ಬಂದಿ ಕುಟುಂಬಸ್ಥರ ಐವರಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಪೇಶೆಂಟ್ 52 ಕ್ಕೆ ಪ್ರಯಾಣದ ಇತಿಹಾಸ ವಿಲ್ಲದಿದ್ದರೂ ಸೋಂಕು ಹೇಗೆ ಹರಡಿತು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಜ್ಯೂಬಿಲಿಯಂಟ್ ಕಾರ್ಖಾನೆಯ 10 ಸಹೋದ್ಯೋಗಿ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ಆಗಿದೆ.ಔಷಧ ಕಂಪನಿಯ ಮೊದಲ ಸೋಂಕಿತ ಗುಣಮುಖವಾಗಿದ್ದು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೈಸೂರಿನ ಅಂತರರಾಜ್ಯ ಮತ್ತು ಅಂತರ ಜಿಲ್ಲೆಯ ಗಡಿದಳನ್ನು ಮುಚ್ಚಿರುವ ಜಿಲ್ಲಾಡಳಿತ ಔಧ ಕಂಪನಿಯ 1500 ಉದ್ಯೋಗಿಗಳನ್ನು ಕ್ವಾರಂಟೈನ್ ನಲ್ಲಿಟ್ಟಿದೆ.
ಆರಂಭದಲ್ಲಿ ಕೇವಲ ಮೂರು ಪ್ರಕರಣಗಳು ಪತ್ತೆಯಾಗಿದ್ದವು, ಅದಾದ ನಂತರ ದಿನದಿಂದ ದಿನಕ್ಕೆ ಮೈಸೂರು ಕೊರೋನಾ ಹಾಟ್ ಸ್ಪಾಟ್ ಆಗಿದೆ.ಜಿಲ್ಲೆಯ 8 ಮಂದಿ ನಿಜಾಮುದ್ದೀನ್ ಸಭೆಗೆ ಹಾಜರಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬೆಳಗ್ಗೆ 6 ರಿಮದ ಸಂಜೆ 6ರವರೆಗೆ ಕಠಿಣ ಲಾಕ್ ಡೌನ್ ವಿಧಿಸಿದ್ದಾರೆ. ವಾನಗಳನ್ನು ಸೀಜ್ ಮಾಡಿ ಮನೆಯಿಂದ ಅನಗತ್ಯವಾಗಿ ಹೊರಬಂದವರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ
ನಂಜನಗೂಡಿನ 2 ವಾರ್ಡ್ ಗಳನ್ನು ಸೀಲ್ ಮಾಡಿದ್ದು ಅದನ್ನು ಇನ್ನು ಮುಂದುವರಿಸುವ ಸಾಧ್ಯತೆಯಿದೆ.