ಕಲಬುರಗಿ: ರಸ್ತೆಯಲ್ಲಿ ಉಗುಳುತ್ತಿದ್ದ ವ್ಯಕ್ತಿ ಪೊಲೀಸ್‍ ವಶಕ್ಕೆ

ಇಲ್ಲಿನ ಧನ್ವಂತ್ರಿ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ಓಡಾಡುತ್ತಾ ಉಗುಳುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಲಬುರಗಿ: ಇಲ್ಲಿನ ಧನ್ವಂತ್ರಿ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ಓಡಾಡುತ್ತಾ ಉಗುಳುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ತಪ್ಪಿತಸ್ಥನನ್ನು ಜಿಲ್ಲೆಯ ಆಳಂದ ತಾಲ್ಲೂಕಿನ ವಿ ಕೆ ಸಲ್ಗಾರ್ ಗ್ರಾಮದ ನಿವಾಸಿ ರಬ್ಬಾನಿ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯು ಪದೇ ಪದೇ ರಸ್ತೆಯಲ್ಲಿ ಉಗುಳುತ್ತಿರುವುದನ್ನು ಗಮನಿಸಿದ ಈ ಪ್ರದೇಶದ ನಿವಾಸಿಗಳು ಸಹಾಯವಾಣಿ ಡೆಸ್ಕ್‌ಗೆ ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆತ ಮಾತು ಪದೇ ಪದೇ ಬದಲಾಯಿಸಿದ್ದಾನೆ. ಈ ಕಾರಣದಿಂದ ಆತನನ್ನು ಆರೋಗ್ಯ ತಪಾಸಣೆಗಾಗಿ ತಕ್ಷಣ ಜಿಮ್ಸ್‍ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಗೆ ಆಗಮಿಸಿದ ರಬ್ಬಾನಿಯ ಸಹೋದರಿ, ತನ್ನ ಸಹೋದರ ಮಾನಸಿಕ ಅಸ್ವಸ್ಥ ಎಂದು ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com