ಕೊರೋನಾಗೆ ಸೋಂಕಿತ ವ್ಯಕ್ತಿ ಸಾವು: ಸರ್ಕಾರದ ಆದೇಶ ಗಾಳಿಗೆ ತೂರುತ್ತಿದ್ದ ಜನರಿಂದಲೇ ಇದೀಗ ಟಿಪ್ಪುನಗರ ಸೀಲ್!

ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ  ಲಾಕ್ಡೌನ್ ನಿಯಮ ಉಲ್ಲಂಘಿನೆ ಮಾಡಿ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ ಜನರೇ ಇದೀಗ ಭೀತಿಗೊಳಗಾಗಿ ಟಿಪ್ಪುನಗರವನ್ನು ಸೀಲ್ ಡೌನ್ ಮಾಡಿದ್ದಾರೆ. 
ಕೊರೋನಾಗೆ ಸೋಂಕಿತ ವ್ಯಕ್ತಿ ಸಾವು: ಸರ್ಕಾರದ ಆದೇಶ ಗಾಳಿಗೆ ತೂರುತ್ತಿದ್ದ ಜನರಿಂದಲೇ ಇದೀಗ ಟಿಪ್ಪುನಗರ ಸೀಲ್!
ಕೊರೋನಾಗೆ ಸೋಂಕಿತ ವ್ಯಕ್ತಿ ಸಾವು: ಸರ್ಕಾರದ ಆದೇಶ ಗಾಳಿಗೆ ತೂರುತ್ತಿದ್ದ ಜನರಿಂದಲೇ ಇದೀಗ ಟಿಪ್ಪುನಗರ ಸೀಲ್!

ಬೆಂಗಳೂರು: ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ  ಲಾಕ್ಡೌನ್ ನಿಯಮ ಉಲ್ಲಂಘಿನೆ ಮಾಡಿ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ ಜನರೇ ಇದೀಗ ಭೀತಿಗೊಳಗಾಗಿ ಟಿಪ್ಪುನಗರವನ್ನು ಸೀಲ್ ಡೌನ್ ಮಾಡಿದ್ದಾರೆ. 

ಮಂಗಳವಾರವಷ್ಟೇ ಈ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟು ಮೃತಪಟ್ಟಿದ್ದರು. ಘಟನೆಯಿಂದ ಭೀತಿಗೊಳಗಾಗಿರುವ ಜನರು ಇದೀಗ ಹೊರಗೆ ಬರದೆ ಸ್ವಯಂ ದಿಗ್ಭಂಧನ ಹಾಕಿಕೊಂಡಿದ್ದಾರೆ. ಜನರ ಈ ಪ್ರತಿಕ್ರಿಯೆಗೆ ಇದೀಗ ಬಿಬಿಎಂಪಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅವರು, ಟಿಪ್ಪು ನಗರದಲ್ಲಿ ಸಾಕಷ್ಟು ಜನರು ಸ್ವಯಂ ಸೀಲ್ ಡೌನ್ ಮಾಡಿಕೊಂಡಿದ್ದಾರೆ. 

ಇದೀಗ ಈ ನಗರದಲ್ಲಿ ಎಲ್ಲಾ ರಸ್ತೆಗಳಲ್ಲಿಯೂ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಇದೀಗ ನಾವು ಕೂಡ ಈ ಪ್ರದೇಶವನ್ನು ಸೀಲ್ ಡೌನ್ ಮಾಡಲು ಚಿಂತನೆ ನಡೆಸಿದ್ದೇವೆ. ಬಿಬಿಎಂಪಿ ಅಧಿಕಾರಿಗಳು ಈ ಪ್ರದೇಶವನ್ನು ಸ್ಯಾನಿಟೈಸ್ ಮಾಡುವ ಅಗತ್ಯವಿದೆ. ಇದೀಗ ಬಿಬಿಎಂಪಿ ಸಾವನ್ನಪ್ಪಿದ ವ್ಯಕ್ತಿಯೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಹುಡುಕಾಟ ನಡೆಸುತ್ತಿದ್ದಾರೆ. ಈ ವರೆಗೂ 25 ಮಂದಿಯನ್ನು ಹುಡುಕಲಾಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ವಾರ್ಡ್ ಕಾರ್ಪೊರೇಟರ್ ಕೂಡ ಸಂಪರ್ಕದಲ್ಲಿರುವ ಶಂಕೆಗಳು ವ್ಯಕ್ತವಾಗಿದ್ದೂ, ಈ ವರೆಗೂ ಅವರನ್ನೂ ಇನ್ನೂ ಪರೀಕ್ಷೆಗೊಳಪಡಿಸಿಲ್ಲ ಎಂದು ಹೇಳಿದ್ದಾರೆ.  ಹಾಗೂ ಅವರ ಕುಟುಂಬವನ್ನು ಇನ್ನೂ ಪರೀಕ್ಷೆಗೊಳಪಡಿಸಿಲ್ಲ ಎಂದು ಹೇಳಿದ್ದಾರೆ. 

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಅವರು ಮಾತನಾಡಿ, ಯಾರನ್ನೂ ಪರೀಕ್ಷೆಗೊಳಪಡಿಸದೆ ಬಿಡುವುದಿಲ್ಲ. ಎಲ್ಲಾ ರೀತಿಯ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಳೀಯರು ಭೀತಿಗೊಳಗಾಗಿದ್ದಾರೆ. ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಪ್ರದೇಶಗಳು ಟಿಪ್ಪುನಗರಕ್ಕೆ ಹತ್ತರವೇ ಇದೆ ಎಂದು ತಿಳಿಸಿದ್ದಾರೆ. 

ಚಾಮರಾಜಪೇಟೆ ಅಂಗಡಿ ಮಾಲೀಕ ಸುಭಾಷ್ ಸಿ ಮಾತನಾಡಿ, ಸ್ಥಳೀಯರ ಪ್ರತಿಕ್ರಿಯೆ ಸ್ವಾಗತಾರ್ಹ. ದೇಶದ ಪ್ರಜೆಗಳು ಎಂಬುದು ಅವರಿಗೆ ಮನವರಿಕೆಯಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ವಾಣಿಜ್ಯ ವ್ಯವಹಾರಗಳು ನಡೆಯುತ್ತವೆ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದಿದ್ದಾರೆ. 

ಇನ್ನು ಕೊರೋನಾ ಸಂಬಂಧ ಈ ವರೆಗೂ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು 2,565 ಮಂದಿ ನೇರ ಹಾಗೂ 6,373 ಮಂದಿ ಪರೋಕ್ಷ ಸಂಪರ್ಕ ಹೊಂದಿರುವವರನ್ನು ಪರಿಶೀಲನೆ ನಡೆಸಿದೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com