ಪಾದರಾಯನಪುರ ಗಲಭೆ ಸಂಬಂಧ ಇಲ್ಲದ ಸಲ್ಲದ ಹೇಳಿಕೆ ಕೊಡುವ ಜಮೀರ್ ಇವರನ್ನು ನೋಡಿ ಕಲಿಯಬೇಕಿದೆ!

ಇತ್ತೀಚೆಗೆ ಇಲ್ಲ ಸಲ್ಲದ ಹೇಳಿಕೆ ಕೊಡುವ ಜಮೀರ್ ಆಹ್ಮದ್ ಖಾನ್ ಗೂ ಮತ್ತು ಬಳ್ಳಾರಿ ಜಿಲ್ಲೆಯ ಮುಸ್ಲೀಂ ಕೈ ಮುಖಂಡರಿಗೂ ಅಜ ಗಜಾಂತರ ವ್ಯತ್ತ್ಯಾಸ ಕಾಣುತ್ತಿದೆ ನೋಡಿ.
ಜಮೀರ್ ಅಹ್ಮದ್-ಇಮಾಮ್
ಜಮೀರ್ ಅಹ್ಮದ್-ಇಮಾಮ್
Updated on: 

ಹೊಸಪೇಟೆ: ಇತ್ತೀಚೆಗೆ ಇಲ್ಲ ಸಲ್ಲದ ಹೇಳಿಕೆ ಕೊಡುವ ಜಮೀರ್ ಆಹ್ಮದ್ ಖಾನ್ ಗೂ ಮತ್ತು ಬಳ್ಳಾರಿ ಜಿಲ್ಲೆಯ ಮುಸ್ಲೀಂ ಕೈ ಮುಖಂಡರಿಗೂ ಅಜ ಗಜಾಂತರ ವ್ಯತ್ತ್ಯಾಸ ಕಾಣುತ್ತಿದೆ ನೋಡಿ.

ಹೌದು ಕೊರೊನ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆಗಿ ಬಡಜನಗಳು ಒಂದೊತ್ತಿನ ಅನ್ನಕ್ಕೂ ಪರದಾಡುವ ಪರಿಸ್ಥಿತಿ‌ ನಿರ್ಮಾಣವಾಗುತ್ತಿದೆ. ಇದನ್ನ ಮನಗಂಡ ಹೊಸಪೇಟೆ ನಗರದ ಮುಸ್ಲೀಂ ಕೈ ಮುಖಂಡ ಹೆಚ್.ಎನ್.ಎಪ್.ಇಮಾಮ್ ನಿಯಾಜಿ ಎಲೆ ಮರೆ ಕಾಯಿ ರೀತಿಯಲ್ಲಿ ಬಡ ಜನಗಳಿಗೆ ಅನ್ನ ಆಹಾರದ ಕಿಟ್ ವಿತರಣೆಮಾಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. 

ಅದರಲ್ಲೂ ಅಧಿಕಾರದಲ್ಲಿದ್ದ ಜನ ಪ್ರತಿನಿಧಿಗಳು ಇಂತ ಕೆಲಸದಲ್ಲಿ ತೊಡಗಿಕೊಂಡಿರುವುದನ್ನ ಹೆಚ್ಚಾಗಿ ಕಾಣುತ್ತೇವೆ. ಆದರೆ ಯಾವುದೇ ಅಧಿಕಾರ ಇಲ್ಲದ ಇಮಾಮ್ ನಿಯಾಜಿ ಇಂತಾ ಸಂಕಷ್ಟದ ಪರಿಸ್ಥಿತಿಯಲ್ಲಿ ಬೀದಿಗಿಳಿದು ಬಡವರಿಗೆ ನೆರವಾಗುವುದಲ್ಲದೆ ತಮ್ಮ ಸಮುದಾಯದ ಜನಗಳಿಗೆ ಕೊರೊನ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಹೊಸಪೇಟೆ ನಗರದ ಇಮಾಮ್ ನಿಯಾಜಿ ಎಂದ್ರೆ ಸರ್ವ ಜನಾಂಗದ ಬಡ ಬಗ್ಗರಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಇಮಾಮ್ ನಿಯಾಜಿಯವರು ಇಂದು ಮಾಡಿದ ಕಾರ್ಯ ಮಾತ್ರ ನಗರದ ಜನ ಸಾಮಾನ್ಯರನ್ನ ಉಬ್ಬೇರಿಸುವಂತೆ ಮಾಡಿದೆ.

ಹೌದು ಆಶಾ ಕಾರ್ಯಕರ್ತೆಯರಿಗೆ‌ ವೈದ್ಯರಿಗೆ ಹಾಗೂ ಪೊಲೀಸರಿಗೆ ಸೇರಿದಂತೆ ಕೊರೊನ ವಿರುದ್ದ ಹೋರಾಡುವ ಪ್ರತಿಯೊಂದು ವರ್ಗದವರಿಗೆ  ಈ ಹಿಂದೆ ಸ್ಯಾನಿಟೈಸರ್ ಸೇರಿದಂತೆ ಅನಿವಾರ್ಯತೆ ಇರುವವರಿಗೆ ಆಹಾರದ ಕಿಟ್ ವಿತರಿಸಿದ್ದ ಇಮಾಜ್ ನಿಯಾಜಿ ಇಂದು ಬಡ ಪತ್ರಕರ್ತರಿಗೂ ಸಹಾಯಸ್ತ ಚಾಚಲು ಮುಂದಾಗಿದ್ದಾರೆ. 

ಹೊಸಪೇಟೆ ನಗರದ ಬಹುತೇಕ ಅರೆ ಕಾಲಿಕ ಪತ್ರಕರ್ತರಿಗೆ ಇಪ್ಪತ್ತೈದು ಕೆಜಿ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ಅವಶ್ಯಕ ವಸ್ತುಗಳನ್ನ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಮುಸ್ಲೀಂರು ಎಂದಕೂಡ್ಲೆ ಕೊರೊನ ನಿಯಂತ್ರಣಕ್ಕೆ ಸ್ಪಂದಿಸದ ಸಮುದಾಯ ಎನ್ನುವ ಹಣೆಪಟ್ಟಿ ಬರುತ್ತಿರುವ ಈ ದಿನಗಳಲ್ಲಿ ಹೊಸಪೇಟೆ ಇಮಾಮ್ ನಿಯಾಜಿ ಮಾಡಿರುವ ಈ‌ ಕಾರ್ಯ ಮಾತ್ರ  ಇತರೆ ಮುಸ್ಲೀಂ ಮುಖಂಡರಿಗೆ ಮಾದರಿಯೇ ಸರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com