ಡಿ.ಜೆ ಹಳ್ಳಿ ಆರೋಪಿಗಳನ್ನು ಹಿಡಿಯಲು ಸಿದ್ಧವಾಯ್ತು 6 ಸ್ಪೆಷಲ್ ಟೀಮ್

ಆಗಸ್ಟ್ 11 ರಾತ್ರಿ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲೆಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಆರೋಪಿಗಳನ್ನು ಹುಡುಕಿ ಹುಡುಕಿ ಬಂಧನಕ್ಕೊಳಪಡಿಸುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಆಗಸ್ಟ್ 11 ರಾತ್ರಿ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲೆಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಆರೋಪಿಗಳನ್ನು ಹುಡುಕಿ ಹುಡುಕಿ ಬಂಧನಕ್ಕೊಳಪಡಿಸುತ್ತಿದ್ದಾರೆ. 

ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾರಿರುವ ಪೊಲೀಸರು ಇದೀಗ ಸಿಸಿಟಿವಿ ಮತ್ತು ವಿಡಿಯೋಗಳನ್ನ ಪರಿಶೀಲನೆ ನಡೆಸುವ ಸಲುವಾಗಿಯೇ ಒಂದು ಬೃಹತ್ ತಂಡವನ್ನು ರಚನೆ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ತಂಡವನ್ನು ಡಿಸಿಪಿ ಶರಣಪ್ಪ ಖುದ್ದು ಮಾನಿಟರ್ ಮಾಡಲಿದ್ದು, ಪ್ರಕರಣ ತನಿಖೆಗೆ ವಿಷೇಶವಾಗಿ 6 ವರ್ಗೀಕರಣ ಮಾಡಿ ತಂಡಗಳನ್ನು ರಚನೆ ಮಾಡಲಾಗಿದೆ. ವಿಶೇಷ ತಂಡವು ಈ ಕೆಳಗಿನಂತಿವೆ...

  • ತಾಂತ್ರಿಕ ತಂಡ.
  • ಸಿಸಿಟಿವಿ ಮತ್ತು ವಿಡಿಯೋ
  • ಬಂಧನ (ಅರೆಸ್ಟಿಂಗ್) ತಂಡ
  • ಇಂಟ್ರಾಗೇಶನ್ (ವಿಚಾರಣಾ) ತಂಡ
  • ಪೇಪರ್ ವರ್ಕ್
  • ಟೀಮ್ ಫಾರ್ ನವೀನ್

ಹೀಗೆ ಬೇರೆ ಬೇರೆ ಮಾದರಿಯ ಕೆಲಸ ಮಾಡಲು ತಂಡಗಳನ್ನ ರಚನೆ ಮಾಡಲಾಗಿದೆ. ಗಲಭೆ ಪ್ರಕರಣ ಸಂಬಂಧ ಈವರೆಗೂ 800 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿರುವ ಪೊಲೀಸರು ವಿಡಿಯೋ ಪರಿಶೀಲನೆಗೆ ಒಂದು ಬೃಹತ್ ತಂಡ ರಚನೆ ಮಾಡಿದ್ದಾರೆ. 

ವಿಡಿಯೋ ಮತ್ತು ಫೋಟೋಗಳನ್ನು ನೋಡಿ ಗಲಭೆಕೋರರನ್ನು ಗುರುತಿಸಲಾಗುತ್ತಿದೆ. ನಂತರ ಟೆಕ್ನಿಕಲ್ ಟೀಮ್ ಸಹಾಯದೊಂದಿಗೆ ಅರೋಪಿಗಳು ಎಲ್ಲಿದ್ದಾರೆ ಎನ್ಮುವುದನ್ನು ಪತ್ತೆ ಮಾಡಲಾಗುತ್ತಿದೆ.

ಪಕ್ಕಾ ಯೋಜನೆಯೊಂದಿಗೆ ಒಬ್ಬೊಬ್ಬ ಅರೋಪಿಗಳನ್ನು ಹುಡುಕಿ ಹುಡುಕಿ ಹೆಡೆಮುರಿಕಟ್ಟಲಾಗುತ್ತಿದೆ. ಟೆಕ್ನಿಕಲ್ ಟೀಮ್ ಈಗಾಗಲೇ ಟವರ್ ಡಂಪ್ ಮಾಡಲಾಗಿದೆ. ಘಟನೆ ಸಮಯದಲ್ಲಿ ಯಾವೆಲ್ಲಾ ಮೊಬೈಲ್ ನಂಬರ್​ಗಳು ಇಲ್ಲಿಗೆ ಬಂದಿವೆ. ಘಟನಾ ಸ್ಥಳದಲ್ಲಿ ಎಷ್ಟು ಸಮಯದ ನಂತರ ಬೇರೊಂದು ಸ್ಥಳಕ್ಕೆ ಪರಾರಿಯಾಗಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲಾಗುತ್ತಿದೆ. ಈಗಾಗಲೇ ಟವರ್ ಡಂಪ್​ನಲ್ಲಿ ಸಾವಿರಾರು ಮೊಬೈಲ್ ನಂಬರ್​ಗಳು ಪತ್ರೆಯಾಗಿದ್ದು ಹೆಚ್ಚಿನ ತನಿಖೆ ಚುರುಕುಗೊಂಡಿದೆ. 

ಸಾಮಾಜಿಕ ಜಾಲತಾಣದ ಮೂಲಕ ಆರೋಪಿಗಳ ಪಟ್ಟಿ:
ಫೇಸ್​ಬುಕ್, ಇನ್ಸ್ಟಾಗ್ರಾಮ್. ವಾಟ್ಸಪ್, ವಿ ಚಾಟ್ ಸೇರಿ ಬೇರೆ ಬೇರೆ ಸಾಮಾಜಿಕ ಜಾಲ ತಾಣದ ಮೂಲಕ ಹಿಂಸಾಚಾರಕ್ಕೆ ಜನರನ್ನು ಸೇರಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇಧೀಗ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿಯೂ ಗಲಭೆಕೋರರನ್ನು ಹುಡುಕಲು ಆರಂಭಿಸಿದ್ದಾರೆ. 

ಈ ಸಂಬಂಧ ಪಟ್ಟಿ ಸಿದ್ಧಪಡಿಸುತ್ತಿರುವ ಪೊಲೀಸರು ಟೆಕ್ನಿಕಲ್ ಮತ್ತು ಸಿಸಿಟಿವಿ ಮತ್ತು ವಿಡಿಯೋ ಟೀಮ್ ನೀಡಿದ ಮಾಹಿತಿ ಮೇರೆಗೆ ಅರೆಸ್ಟಿಂಗ್ ಟೀಮ್ ಆರೋಪಿಗಳನ್ನು ಅರೆಸ್ಟ್ ಮಾಡುತ್ತಿದೆ ಎಂದು ತಿಳಿದುಬಂದಿದೆ. 

ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದ ಕೂಡಲೇ ಒಂದು ಸುತ್ತಿನ ವಿಚಾರಣೆ ನಡೆಸಲಾಗುತ್ತಿದೆ. ಈ ವಿಚಾರಣೆಯಲ್ಲಿ ಆರೋಪಿ ಜೊತೆ ಯಾರಿದ್ದರು ಎನ್ನುವುದನ್ನು ತಿಳಿಯಲಾಗುತ್ತಿದೆ. ಕೂಡಲೇ ಆರೋಪಿ ನೀಡಿದ ಮಾಹಿತಿ ಮೇರೆಗೆ ಮತ್ತಷ್ಟು ಜನರನ್ನು ಬಂಧಿಸಲಾಗುತ್ತಿದೆ. 

ಆರೋಪಿಗಳು ಯಾವ ಸಂಘಟನೆಯ ಪರವಾಗಿದ್ದರು. ಯಾರಿಂದ ಪ್ರಚೋದನೆಗೆ ಒಳಗಾಗಿದ್ದರು ಅಥವಾ ಇವರುಗಳು ಅದೆಷ್ಟು ಜನರಿಗೆ ಪ್ರಚೋದನೆ ಕೊಡುತ್ತಿದ್ದರು... ಹೀಗೆ ಹಲವು ಅಯಾಮದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ನಂತರ ವಿಚಾರಣಾ ತಂಡವು ಆರೋಪಿಗಳನ್ನು ಪೇಪರ್ ವರ್ಕ್ ಟೀಮ್​ಗೆ ನೀಡುತ್ತಾರೆ. ಪೇಪರ್ ವರ್ಕ್ ಸಹ ಬಹಳ ಪ್ರಮುಖ ಆರೋಪಿಗಳ ಫಿಂಗರ್ ಪ್ರಿಂಟ್, ಹೆಸರು, ಫೋಟೋ ಮತ್ತು ಇತರ ಮಾಹಿತಿ ಪಡೆದು ಅಧಿಕೃತವಾಗಿ ಬಂಧನಕ್ಕೊಳಪಡಿಸುತ್ತಾರೆ. 

ಇನ್ನು ಮತ್ತೊಂದು ತಂಡ ಪ್ರತ್ಯೇಕವಾಗಿ ನವೀನ್ ವಿಚಾರಣೆ ನಡೆಸುತ್ತಿದೆ. ನವೀನ್ ಮಾಡಿದ ಕೆಲಸಗಳ ಕುರಿತ ಮಾಹಿತಿ ಈಗಾಗಲೇ ಬಯಲಿಗೆ ಬಂದಿದ್ದು, ಜೊತೆಗೆ ನವೀನ್ ಹಿಂದೆ ಯಾರಿದ್ದರು...? ಯಾರಾದೂ ಹಿಂದೆ ನಿಂತು ಗಲಭೆ ಸೃಷ್ಟಿಸಿದ್ದರಾ ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com