ಹಾಸನದ ಗ್ರಾಮೀಣ ಪ್ರತಿಭೆ ಡಾ. ಸ್ನೇಹ ರಾಕೇಶ್ ಗೆ ಜಾಗತಿಕ ಪೋರ್ಬ್ಸ್ ಪತ್ರಿಕೆಯ ಗೌರವ

ಹಾಸನದ ಅಪ್ಪಟ ಗ್ರಾಮೀಣ ಪ್ರತಿಭೆ ಡಾ. ಸ್ನೇಹ ರಾಕೇಶ್ ಬ್ಯುಸಿನೆಸ್ ಮಿಂಟ್ ನಿಂದ ಅತ್ಯುತ್ತಮ ಉದಯೋನ್ಮುಖ ಮಹಿಳಾ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಸ್ನೇಹ ರಾಕೇಶ್
ಸ್ನೇಹ ರಾಕೇಶ್
Updated on

ಬೆಂಗಳೂರು: ಹಾಸನದ ಅಪ್ಪಟ ಗ್ರಾಮೀಣ ಪ್ರತಿಭೆ ಡಾ. ಸ್ನೇಹ ರಾಕೇಶ್ ಬ್ಯುಸಿನೆಸ್ ಮಿಂಟ್ ನಿಂದ ಅತ್ಯುತ್ತಮ ಉದಯೋನ್ಮುಖ ಮಹಿಳಾ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.

ಗ್ರಾಮೀಣ ಸೊಗಡಿನ ಡಾ. ಸ್ನೇಹ ರಾಕೇಶ್ ಈ ಮೂಲಕ ದೊಡ್ಡ ಕನಸುಗಳೊಂದಿಗೆ ಯಶಸ್ಸಿನ ಶಿಖರವೇರುತ್ತಿದ್ದಾರೆ. ಇವರ ಸಾಧನೆಯನ್ನು ಜಾಗತಿಕ ಪೋಬ್ಸ್ ಪತ್ರಿಕೆ ಗುರುತಿಸಿದೆ. ತಂತ್ರಜ್ಞಾನ ಉದ್ಯಮ ರಂಗದಲ್ಲಿ ಮಹಿಳಾ ಉದ್ಯಮಿಯಾಗಿ ಯಶಸ್ಸಿನ ಪಥದಲ್ಲಿ ಚಲಿಸುತ್ತಿದ್ದಾರೆ. ಹಾಸನದಿಂದ ಬೆಲ್ಜಿಯಂ ವರೆಗೆ ಸಂಚರಿಸಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಡಾ. ಸ್ನೇಹ ರಾಕೇಶ್, ತಂತ್ರಜ್ಞಾನ ಕೈಗಾರಿಕಾ ವಲಯದಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ. “ ಸ್ಪರ್ಧೆಯಿಂದ ಹಿಂದೆ ಸರಿಯಬಾರದು, ವಿಶ್ವಾಸ ಕಳೆದುಕೊಳ್ಳಬಾರದು “ ಎನ್ನುವುದೇ ಇವರ ಯಶೋಗಾಥೆಯ ಮೂಲ ಮಂತ್ರವಾಗಿದೆ.

ಹಾಸನದ ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲಮೋ, ಎಂ.ಎಸ್.ರಾಮಯ್ಯ ಸ್ಕೂಲ್ ಆಪ್ ಅಡ್ವಾನ್ಸ್ ಸ್ಟಡೀಸ್ ನಲ್ಲಿ ಎಂ.ಎಸ್.ಸಿ. ಇಂಜಿನಿಯರಿಂಗ್ ಶಿಕ್ಷಣ ಪೂರೈಸಿರುವ ಇವರು, 19 ವರ್ಷದಲ್ಲೇ ಸಾಪ್ಟ್ ವೇರ್ ಇಂಜಿನಿಯರ್ ಆಗಿ ನೇಮಕಗೊಂಡರು. ಪ್ರಮುಖ ಐದು ಕಂಪೆನಿಗಳಲ್ಲಿ ಕೆಲಸ ಮಾಡಿ ನಂತರ ಉದ್ಯಮಿಯಾಗಿ ಹೊರ ಹೊಮ್ಮಿದರು. ಮಾರಾಟ ವಿಭಾಗ, ವ್ಯಾಪಾರ ಕಾರ್ಯತಂತ್ರ, ವ್ಯಾಪಾರ ಅಭಿವೃದ್ಧಿ, ವ್ಯಾಪಾರ ವಹಿವಾಟು ವಿಸ್ತರಣೆಯಂತಹ ಉದ್ಯಮಿಯಾಗಲು ಬೇಕಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡರು. ಕೆಲಸದ ಜತೆಗೆ ಕಂಪ್ಯೂಟರ್ ಸೈನ್ಸ್ ಮತ್ತು ನೆಟ್ ವರ್ಕಿಂಗ್ ನಲ್ಲಿ ಮಾಸ್ಟರ್ ಡಿಗ್ರಿ ಗಳಿಸಿ ಇನ್ನಷ್ಟು ನೈಪುಣ್ಯತೆ ಪಡೆದರು. “ ವಿ ಕ್ರಿಯೇಟ್ ಸಾಪ್ಟ್ ವೇರ್ ಸಲ್ಯೂಷನ್ಸ್” ಎಂಬ ಹೆಸರಿನ ಕಂಪನಿಯನ್ನು ಹುಟ್ಟು ಹಾಕಿ ಬಳಿಕ ಇದರ ಹೆಸರನ್ನು “ ಅಕರಮ್ಯಾಕ್ಸಸ್ ಟೆಕ್ ಪ್ರೈವೈಟ್ ಲಿಮಿಟೆಡ್ ಎಂದು ಹೆಸರು ಬದಲಿಸಿಕೊಂಡು ಮುನ್ನಡೆಸುತ್ತಿದ್ದಾರೆ.

ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ನೀಡುವ, ನಿರುದ್ಯೋಗ ನಿವಾರಿಸುವ, ಉಜ್ವಲ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಯುವ ಜನಾಂಗದ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ. 2019ರ ಜೂನ್ ನಲ್ಲಿ ಅಂತಾರಾಷ್ಟ್ರೀಯ ಮ್ಯಾಗಜಿನ್ ಬ್ಯುಸಿನೆಸ್ ಕನೆಕ್ಟ್ ನ ಉತ್ತಮ ಮಹಿಳಾ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಸಾಧನೆಯನ್ನು ಪೋಬ್ಸ್ ಪತ್ರಿಕೆ ಗುರುತಿಸಿದ್ದು, ಕರುನಾಡಿನ ಮಹಿಳಾ ಉದ್ಯಮಿಯ ಸಾಧನೆಯನ್ನು ಜಗತ್ತಿಗೆ ಪಸರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com