ಸಾರಿಗೆ ನೌಕರರ ಕೆಲ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಸಮ್ಮತಿ: ಕೊನೆಯ ಸುತ್ತಿನ ಮಾತುಕತೆ

ಸಾರಿಗೆ ಮುಷ್ಕರ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೋರಾಟಗಾರರ ಕೆಲ ಬೇಡಿಕೆ ಈಡೇರಿಕೆಗೆ ನಿರ್ಧಾರ ಕೈಗೊಂಡು ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ.
ಸಚಿವರ ಜೊತೆಗೆ ಮುಖ್ಯಮಂತ್ರಿ ಸಭೆ
ಸಚಿವರ ಜೊತೆಗೆ ಮುಖ್ಯಮಂತ್ರಿ ಸಭೆ
Updated on

ಬೆಂಗಳೂರು: ಸಾರಿಗೆ ಮುಷ್ಕರ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೋರಾಟಗಾರರ ಕೆಲ ಬೇಡಿಕೆ ಈಡೇರಿಕೆಗೆ ನಿರ್ಧಾರ ಕೈಗೊಂಡು ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ. ಅದರಂತೆ
ತಮ್ಮ ನೇತೃತ್ವದಲ್ಲಿನ ಸಚಿವರ ತಂಡ ವಿಧಾನಸೌಧಕ್ಕೆ ತೆರಳಿದ್ದು, ಸದ್ಯದಲ್ಲೇ ಕೊನೆ ಸುತ್ತಿನ ಮಾತುಕತೆಯನ್ನು ಯೂನಿಯನ್ ಮುಖಂಡರ ಜೊತೆಗೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಜೊತೆಗೆ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಾರಿಗೆ ನೌಕರರ ಪ್ರಮುಖರನ್ನು ಕರೆದು ಎರಡು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಸರ್ಕಾರವೂ ಕೂಡಾ ಕೆಲವೊಂದು ಬೇಡಿಕೆ ಈಡೇರಿಕೆಗೆ ಸಹಮತವನ್ನು ಕೊಟ್ಟಿದೆ ಎಂದರು.

ಸಿಬ್ಬಂದಿ ಸುಮಾರು 10 ಬೇಡಿಕೆಗಳನ್ನು ಕೇಳಿದ್ದರು ಅದರಲ್ಲಿ ಈಡೇರಿಕೆ ಮಾಡುವುದರ ಕುರಿತು ನಮ್ಮ ಹಣಕಾಸು ಇತಿಮಿತಿಯೊಳಗೆ ನಾವು ಕೂಡಾ ಒಂದು ಹೆಜ್ಜೆ ಮುಂದೆ ಹೋಗಿದ್ದು, ಎಲ್ಲಾ ಚರ್ಚೆ ಆಗಿದೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಒಪ್ಪಿಗೆ ಪಡೆದು ಕೊನೆಯ ಸುತ್ತಿನ ಮಾತುಕತೆ ನಡೆಸಿ ಅರ್ಧ ಗಂಟೆಯಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಅಂತ್ಯವನ್ನು ಹಾಡುವ ನಿರ್ಣಯ ಮಾಡಿದ್ದೇವೆ. ಯೂನಿಯನ್ ಮುಖಂಡರ ಸಮಕ್ಷಮದಲ್ಲಿ ವಿಧಾನಸೌಧದಲ್ಲಿ ಪ್ರಕಟಣೆ ಕೊಟ್ಟು ಮುಷ್ಕರದ ಸಮಸ್ಯೆಯನ್ನು ಮುಗಿಸುವ ತೀರ್ಮಾನಕ್ಕೆ ನಾವೆಲ್ಲ ಬಂದಿದ್ದೇವೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com