ಚಿಕ್ಕಮಗಳೂರು: ಕಂದಾಯ ಅಧಿಕಾರಿಗೆ ನಡುರಸ್ತೆಯಲ್ಲೇ ಡಿಸಿಯಿಂದ ಕಪಾಳಮೋಕ್ಷ!

ಪ್ರವಾಹ ಪರಿಹಾರ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಂದಾಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕಳಸದ ಹಿರೇಬೈಲ್ ನಲ್ಲಿ ನಡೆದಿದೆ.
ಬಗಾದಿ ಗೌತಮ್
ಬಗಾದಿ ಗೌತಮ್
Updated on

ಚಿಕ್ಕಮಗಳೂರು: ಪ್ರವಾಹ ಪರಿಹಾರ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಂದಾಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕಳಸದ ಹಿರೇಬೈಲ್ ನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್,  ಆರ್ ಐ ಅಜ್ಜೇ ಗೌಡ ಕತ್ತಿನ ಪಟ್ಟಿ ಹಿಡಿದು ಎಳೆದು ಕೆನ್ನೆಗೆ ಹೊಡೆದಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ವೇಳೆ ಅಂಗಡಿಯಿಂದ ಖರೀದಿ ಮಾಡಿದ್ದ ರೇಶನ್ ದುಡ್ಡು ಇನ್ನೂ ಕೊಟ್ಟಿಲ್ಲ.  8 ತಿಂಗಳಾದರೂ ಹಣ ನೀಡಿಲ್ಲ ಎಂದು ಹಿರೇಬೈಲಿಗೆ ಭೇಟಿ ನೀಡಿದ್ದ ವೇಳೆ ದೂರಿದ್ದರು. 

ಕಂದಾಯ ಅಧಿಕಾರಿ ಅಜ್ಜೇಗೌಡರನ್ನು ವಿಷಯದ ಬಗ್ಗೆ ವಿಚಾರಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್,  ಸರ್ಕಾರದಿಂದ ಹಣ ಬಂದಿದೆ. ಯಾಕೆ ಬಿಲ್ ಪಾವತಿ ಮಾಡಿಲ್ಲ ಎಂದು ಪ್ರಶ್ನಿಸಿದರು. 

ಆರ್ ಐ ( ಕಂದಾಯ ಅಧಿಕಾರಿ) ಸಮರ್ಪಕ ಉತ್ತರ ನೀಡದೆ ಇದ್ದಾಗ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com