ದರೋಡೆಗೆ ಸಂಚು ರೂಪಿಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಮೂವರು ಆರೋಪಿಗಳ ಬಂಧನ

ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ವಿನಾಯಕ್ ನಗರದ ಲಕ್ಷ್ಮೀಕಾಂತ್ (20), ಹೆಸರಘಟ್ಟ ನಿವಾಸಿ ಆನಂದ್ (20), ಚಿಕ್ಕ ಬಿದರುಕಲ್ಲು ನಿವಾಸಿ ರಾಕೇಶ್ (21) ಬಂಧಿತರು. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹೆಸರಘಟ್ಟ ಕೆರೆ ಬಳಿ ಐವರ ಗುಂಪೊಂದು ದರೋಡೆ ಮಾಡಲು ಸಂಚು ರೂಪಿಸಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಸೋಲದೇವನಹಳ್ಳಿ ಪಿಎಸ್ಐ ವಸಂತ್ ಕುಮಾರ್ ಮತ್ತು ಕಾನ್ಸ್​ಟೇಬಲ್​​​ ಇಮಾಮ್ ಸಾಬ್ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು. 

ಈ ವೇಳೆ ಲಾಂಗ್, ಡ್ಯಾಗರ್, ಚಾಕು ಹಾಗೂ ದೊಣ್ಣೆಗಳನ್ನು ಹಿಡಿದು ನಿಂತಿದ್ದ ದರೋಡೆಕೋರರ ತಂಡ, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದೆ.  ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಹೆಸರಘಟ್ಟ ಕೆರೆ ಬಳಿ ಐವರ ಗುಂಪೊಂದು ದರೋಡೆಗೆ ಸಂಚು ರೂಪಿಸಿ ಸಜ್ಜಾಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸೋಲದೇವನಹಳ್ಳಿ ಪಿಎಸ್ಐ ವಸಂತ್ ಕುಮಾರ್ ಮತ್ತು ಕಾನ್ಸ್​ಟೇಬಲ್​​​ ಇಮಾಮ್ ಸಾಬ್ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com