ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರೌಡಿಶೀಟರ್ ಪಾಗಲ್ ಸೀನ ಹತ್ಯೆ ಆರೋಪಿಗಳ ಬಂಧನ

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಶ್ರೀನಿವಾಸ್ ನನ್ನು ಕೊಲೆ ಮಾಡಿದ್ದ ಒಂಭತ್ತು ಜನರನ್ನು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಶ್ರೀನಿವಾಸ್ ನನ್ನು ಕೊಲೆ ಮಾಡಿದ್ದ ಒಂಭತ್ತು ಜನರನ್ನು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್, ವಿಜಯ್, ಸುರೇಶ್, ಪೀಟರ್ ಕುಮಾರ್, ಲೋಕೇಶ್  ಹಾಗೂ ಬಾಲಸುಬ್ರಹ್ಮಣ್ಯಂ, ನವಾಜ್, ದಿಲೀಪ್, ನ್ಯಾಮತ್ ಬಂಧಿತ ಆರೋಪಿಗಳು.

ಜೂ.7 ರಂದು ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ ಬಿ ಶಾಸ್ತ್ರಿ ನಗರದ ಅತ್ತರ್ ಕಾಂಪೌಂಡ್ ಬಳಿಯ ಜಮೀಲ್ ಅಹಮಸ್ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಜಾಡು ಹಿಡಿಯಲು ಪೊಲೀಸರು ಒಂದು ತಂಡವನ್ನು ರಚಿಸಿದ್ದರು.

ಕೊಲೆಯಾದ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನ ಜೆಪಿ ನಗರ ರೌಡಿಶೀಟರ್ ಆಗಿದ್ದನು. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಕಳೆದ 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದನು. ಸೀನ ಹಾಗೂ ಆರೋಪಿ ಸಂತೋಷ ಕಳೆದ ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ, ಸೀನ ಸಂತೋಷನ ಸಹಚರರನ್ನು ಸೇರಿಸಿಕೊಂಡು ಮನೆ ಕಳವು ಸೇರಿ ಇತರ ಚಟುವಟಿಕೆಗಳಲ್ಲಿ ಭಾಗಿಮಾಡಿಕೊಂಡಿದ್ದರಿಂದ ಇದೇ ವಿಷಯಕ್ಕೆ ಸಂತೋಷ ಹಾಗೂ ಸೀನನ ನಡುವೆ ದ್ವೇಷ ಬೆಳೆದಿತ್ತು.

ಅಲ್ಲದೇ, ಬಳ್ಳಾರಿ ಶಿವ ಇತರರೊಂದಿಗೆ ಸೇರಿ ಈ ಹಿಂದೆ ಸಂತೋಷ್ ಗೆಳೆಯನಾದ ಶ್ರೀನಿವಾಸ್ ಅಲಿಯಾಸ್ ಸ್ವ್ಯಾಂಡ್ ಕುಟ್ಟಿಯನ್ನು ಕೊಲೆ ಮಾಡಿದ್ದನು.ಹೀಗಾಗಿ ಬಳ್ಳಾರಿ ಶಿವ ಹಾಗೂ ಆತನ ಸಹಚರರನ್ನು ಕೊಲೆ ಮಾಡಲು ಸಂತೋಷ್ ಸಂಚೂ ರೂಪಿಸಿದ್ದನು. ಈ ವಿಷಯ ತಿಳಿದ ಶಿವನ ಸಹೋದರ ಪುನೀತ್ ಎಂಬಾತ ಸಂತೋಷ್ ನಿಗೆ ಹುಡುಕಿಕೊಡುವಂತೆ ಸೀನನಿಗೆ ತಿಳಿಸಿದ್ದನು.‌ಅದಕ್ಕಾಗಿ ಸೀನ, ತನಗೆ 10 ಲಕ್ಷ ರೂ. ನೀಡಿದರೇ, ಸಂತೋಷನನ್ನು ಹುಡುಕಿಕೊಡುವುದಾಗಿ ಷರತ್ತು ವಿಧಿಸಿದ್ದರು. ಈ ಮಾತುಕತೆ ವಿಜಯ್ ಎದುರು ನಡೆದಿತ್ತು. ನಂತರ ವಿಜಯ್, ಸಂತೋಷನಿಗೆ ನಡೆದ ಮಾಹಿತಿಯನ್ನು ತಿಳಿಸಿದ್ದನು. ಈ ವಿಷಯ ಕೂಡ ಸಂತೋಷ್ ಹಾಗೂ ಸೀನ್ ನ ನಡುವೆ ವೈರತ್ವ ಬೆಳೆಯಲು ಕಾರಣವಾಗಿದೆ‌‌ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ವಿಜಯ್ ಗೆ ಸೀನ, ಗಾಂಜಾ ತಂದು ಕೊಡುವಂತೆ ಪೀಡಿಸುವಂತೆ ಪೀಡಿಸಿದ್ದಲ್ಲದೇ, ಒಂದು ಬಾರಿ ಹೊಡೆದಿದ್ದನು. ಸಂತೋಷ್ ಸಹಚರರಿಗೂ ಸೀನ, ಗಾಂಜಾ ಹಾಗೂ ಹಣಕ್ಕಾಗಿ ಪೀಡಿಸಿದ್ದನು. ಹೀಗಾಗಿ ಎಲ್ಲರೂ ಒಗ್ಗೂಡಿ ರೌಡಿಶೀಟರ್ ಸೀನನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com