
ಬೆಂಗಳೂರು: ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಗುರುವಾರ ಮಾಸ್ಕ್ ದಿನವನ್ನು ಆಚರಿಸಲಾಗುತ್ತಿದೆ.
ಕೊರೋನಾ ನಿಯಂತ್ರಿಸಲು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರ ಜೂ.18 ರಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಿಸುವುದಾಗಿ ಘೋಷಣೆ ಮಾಡಿತ್ತು.
ಇದರಂತೆ ಇಂದು ಮಾಸ್ಕ್ ದಿನವನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಬೇರೊಬ್ಬರ ಸಂಪರ್ಕಕ್ಕೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸುವುದರಿಂದ ಪರಸ್ಪರ ಕೊರೋನಾ ಸೋಂಕು ರಡುವುದನ್ನು ಶೇ.90ರಷ್ಟು ನಿಯಂತ್ರಿಸಬಹುದು. ಹೀಗಾಗಿ ಈ ಕುರಿತು ಅರಿವು ಮೂಡಿಸಲು ಇಂದು ಜಾಗೃತಿ ಪಾದಯಾತ್ರೆ ಕೈಗೊಂಡು ಮಾಸ್ಕ್ ದಿನ ಆಚರಿಸಲಾಗುತ್ತಿದೆ.
ರಾಜ್ಯದಾದ್ಯಂತ ಪ್ರತಿ ಜಿಲ್ಲಾ, ತಾಲೂಕು, ಕಾರ್ಪೊರೇಷನ್, ಪಂಚಾಯತ್, ಕಂದಾಯ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಕಾರ್ಯಕ್ರಮ ನಡೆಯಬೇಕು. ಜೊತೆಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಜಾಗೃತಿ ಅಭಿಯಾನ ನಡೆಸಲಾಗುವುದು. ಪಾದಯಾತ್ರೆಯಲ್ಲಿ ಮಾಸ್ಕ್ ಧರಿಸುವುದು ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಮೂಲಕ ಕೋವಿಡ್-19 ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ತಿಳಿಸಿದ್ದಾರೆ.
Advertisement