ಜಿ ಕೆಟಗರಿ ನಿವೇಶನದ ನಿರೀಕ್ಷೆಯಲ್ಲಿ ಬಸವರಾಜ್ ಬೊಮ್ಮಾಯಿ, ಎಂಬಿ ಪಾಟೀಲ್ ಸೇರಿ 90 ಶಾಸಕರು!

ನಗರದಲ್ಲಿ ಜಿ ದರ್ಜೆಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿವೇಶನ ಪಡೆಯುವ 90 ಶಾಸಕರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವರಾದ ಎಂ ಬಿ ಪಾಟೀಲ್, ಡಾ ಜಿ ಪರಮೇಶ್ವರ್ ಅವರ ಹೆಸರುಗಳೂ ಇವೆ.
ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ
Updated on

ಬೆಂಗಳೂರು: ನಗರದಲ್ಲಿ ಜಿ ದರ್ಜೆಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿವೇಶನ ಪಡೆಯುವ 90 ಶಾಸಕರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವರಾದ ಎಂ ಬಿ ಪಾಟೀಲ್, ಡಾ ಜಿ ಪರಮೇಶ್ವರ್ ಅವರ ಹೆಸರುಗಳೂ ಇವೆ. ಫಲಾನುಭವಿಗಳ ಪಟ್ಟಿಯನ್ನು ಸಮಿತಿ ಮುಂದೆ ತರಲಾಗಿದ್ದು, ಅನುಮೋದನೆ ಸಿಗಬೇಕಿದೆ.


1984ರ ಬಿಡಿಎ ನಿಯಮ 5ರಡಿ(ನಿವೇಶನಗಳ ಹಂಚಿಕೆ) ಹಲವು ವರ್ಗೀಕರಣ ಮಾಡಲಾಗಿದ್ದು ಅದರಡಿ ನಿವೇಶನಗಳನ್ನು ಹಂಚಲಾಗುತ್ತಿದೆ. ಅವುಗಳಲ್ಲಿ ಒಂದು ವರ್ಗ ಜಿ ದರ್ಜೆ. ಅದು ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳಿಗೆ ನೀಡುವ ಬಿಡಿಎ ನಿವೇಶನ. 

ನಿನ್ನೆ ವಿಧಾನಸಭೆ ಕಲಾಪ ವೇಳೆ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ, 1997ರಿಂದ 467 ಶಾಸಕರು ಜಿ ವರ್ಗದ ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 377 ಶಾಸಕರಿಗೆ ವಿತರಿಸಲಾಗಿದೆ. ಅರ್ಜಿ ಸಲ್ಲಿಸಿದ 90 ಶಾಸಕರಿಗೆ ನಿವೇಶನ ಸಿಕ್ಕಿಲ್ಲ. ನಿವೇಶನಕ್ಕಾಗಿ ಕಾಯುತ್ತಿರುವ ಶಾಸಕರಲ್ಲಿ ಮಾಜಿ ಸಚಿವರುಗಳಾದ ತನ್ವೀರ್ ಸೇಠ್, ಗಾಲಿ ಸೋಮಶೇಖರ ರೆಡ್ಡಿ, ಯು ಟಿ ಖಾದರ್, ಕೃಷ್ಣಯ್ಯ ಶೆಟ್ಟಿ, ಸಂತೋಷ್ ಲಾಡ್, ಜಮೀರ್ ಅಹ್ಮದ್, ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಇದ್ದಾರೆ ಎಂದರು.


ಇದೀಗ ನ್ಯಾಯಮೂರ್ತಿ ಶೈಲೇಂದ್ರ ಸಮಿತಿ ಈ ವಿಚಾರವನ್ನು ತೆಗೆದುಕೊಂಡು ಹೈಕೋರ್ಟ್ ಆದೇಶದ ಪ್ರಕಾರ ಜಿ ವರ್ಗದ ನಿವೇಶನಗಳನ್ನು ಅಖೈರುಗೊಳಿಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com