

ಮೈಸೂರು: ಒಂದೆಡೆ ಕೋರೋನಾ ಭೀತಿಯಿಂದ ಸಾರ್ವಜನಿಕರು ಹೊರಬರಲು ಹೆದರುತ್ತಿದ್ದರೆ, ಮತ್ತೊಂದೆಡೆ ನೂತನ ಜೋಡಿಯೊಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ಮಾಸ್ಕ್ ಧರಿಸಿಕೊಂಡು ಪ್ರೀ-ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ.
ತಮ್ಮ ವೆಡ್ಡಿಂಗ್ ಫೋಟೋ ಶೂಟ್'ನ ಜೊತೆಗೆ ಮಾಸ್ಕ್ ಧರಿಸಿಕೊಕಂಡು ಕೆಲವೊಂದು ಫೋಟೋಗಳನ್ನು ಜೋಡಿಗಳು ತೆಗೆದುಕೊಂಡಿರುವುದು, ವೈರಲ್ ಆಗುತ್ತಿದೆ.
ಮಾಸ್ಕ್ ಧರಿಸಿಕೊಂಡು ಫೋಟೋ ಶೂಟ್ ಮಾಡಿಸಬೇಕೆಂದುಕೊಂಡಿರಲಿಲ್ಲ. ಸಾಮಾನ್ಯದಂತೆಯೇ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದೆವು. ಕೊರೋನಾ ವೈರಸ್ ನಿಂದಾಗಿ ಸರ್ಕಾರ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಜನರಿಗೆ ಮಾಸ್ಕ್ ಧರಿಸುವಂತೆ ತಿಳಿಸಲು ಮಾಸ್ಕ್ ಧರಿಸಿಯೇ ಫೋಟೋ ಶೂಟ್ ಮಾಡಿಸಿದ್ದೇವೆ ಎಂದು ಫೋಟೋ ಶೂಟ್ ಮಾಡಿಸಿಕೊಂಡ ಜೋಡಿ ಮಧುಗುಪ್ತಾ ಹಾಗೂ ತಿಟು ಎಂಬುವವರು ಹೇಳಿದ್ದಾರೆ.
ಫೋಟೋಗ್ರಾಫರ್ ಆಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ನನ್ನ ಕರ್ತವ್ಯ ಕೂಡ ಇದೆ. ಇದೊಂದು ಸಣ್ಣ ಪ್ರಯತ್ನವಾಗಿದೆ. ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂದು ನಾವು ಈ ರೀತಿ ಮಾಡಿಲ್ಲ. ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಡಿದ್ದೇವೆಂದು ಫೋಟೋಗ್ರಾಫರ್ ವಿಕ್ರಮ್ ರಾವ್ ತಿಳಿಸಿದ್ದಾರೆ.