

ಹೊಸಪೇಟೆ: ಅಕ್ಕಿ ಸಾಗಾಣಿಕೆ ಮಾಡುತಿದ್ದ ವ್ಯಾಪಾರಿಯ ಲಾರಿ ತಡೆದ ಪಿ.ಎಸ್.ಐ. ಹಾಗೂ ಪಿ.ಸಿ. ಲಂಚಕ್ಕೆ ಆಸೆಪಟ್ಟು ತಮ್ಮ ಕೆಲಸ ಕಳೆದುಕೊಂಡ ಪ್ರಕರಣ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಹೌದು, "ನೀವು ಸಾಗಾಟಮಾಡುತ್ತಿರುವುದು ಪಡಿತರ ಅಕ್ಕಿ, ಒಂದು ವೇಳೆ ನೀವು ಐವತ್ತು ಸಾವಿರ ಲಂಚಕೊಡದಿದ್ದರೆ. ಲಾರಿ ಸಮೇತ ಅಕ್ಕಿಯನ್ನ ಸಹ ವಶ ಪಡಿಸಿಕೊಂಡು ನಿಮ್ಮ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ ಹಿರೇಹಡಗಲಿ ಪಿ.ಎಸ್.ಐ ರಾಮಪ್ಪನಾಯ್ಕ್ ಮತ್ತು ಪಿ.ಸಿ.ಉಮೇಶ್ ನಾಯ್ಕ್ ಇದೀಗ ಅಮಾನತಾಗಿರುವ ಅಧಿಕಾರಿಗಳು.
ಹಾವೇರಿ ಮೂಲದ ವಾಸಿಮ್ ಎನ್ನುವ ಅಕ್ಕಿ ವ್ಯಾಪಾರಿಯ ಲಾರಿ ತಡೆದ ಹಿರೇಹಡಗಲಿ ಪೊಲೀಸ್ ಠಾಣೆಯ ಪಿ.ಎಸ್.ಐ.ರಾಮಪ್ಪನಾಯ್ಕ್ ಮತ್ತು ಪಿ.ಸಿ.ಉಮೇಶ್ ನಾಯ್ಕ್, ಲಾರಿಯನ್ನ ಠಾಣೆಗೆ ತಂದು ದಿನವಿಡೀ ಪೊಲೀಸ್ ಠಾಣೆ ಮುಂದೆ ನಿಲ್ಲಿಸಿಕೊಂಡು ಪ್ರಕರಣವನ್ನೂ ದಾಖಲಿಸದೆ, ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇನ್ನು ಪ್ರಕರಣಕ್ಕೆ ಸಂಭಂದಿಸಿದಂತೆ ವ್ಯಾಪಾರಿ ವಾಸಿಮ್ ಇದು ಪಡಿತರ ಅಕ್ಕಿ ಅಲ್ಲ ರೈಸ್ ಮಿಲ್ ನಿಂದ ಖರೀದಿಸಿ ನಾನು ಗ್ರಾಹಕರಿಗೆ ಮಾರಾಟಮಾಡುತ್ತಿದ್ದೇನೆ ಎಂದು ಗೋಗರೆದರೂ ಈ ಇಬ್ಬರು ಲಂಚಬಾಕ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ತಮ್ಮ ಬೇಡಿಕೆಯನ್ನ ಸಡಿಲಗೊಳಿಸಿರಲಿಲ್ಲ, ಇದರಿಂದ ಬೇಸತ್ತ ವಾಸಿಮ್ ಬಳ್ಳಾರಿ ಎಸ್ಪಿ ಸಿ.ಕೆ.ಬಾಬ ಅವರಿಗೆ ದೂರು ನೀಡುವ ಮೂಲಕ ತಮ್ಮ ಕಷ್ಟವನ್ನ ಹೇಳಿಕೊಂಡಿದ್ರು, ಪ್ರಕರಣವನ್ನ ತನಿಖೆ ನಡೆಸಲು ಹೂವಿನಹಡಗಲಿ ಡಿ.ಎಸ್ಪಿಗೆ ಜವಾಬ್ದಾರಿ ನೀಡಿದ ಎಸ್ಪಿ ನಿನ್ನೆ ವರದಿಯ ಆಧರಿಸಿ ಈ ಇಬ್ಬರನ್ನ ಅಮಾನತ್ತುಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಹಿರೇಹಡಗಲಿ ಪೊಲೀಸ್ ಠಾಣೆಯ ಜನ ಸಾಮಾನ್ಯರು ಒಂದು ರೀತಿಯಲ್ಲಿ ನಿಟ್ಟುಸಿರು ಬಿಟ್ಟಿದ್ದು ಬ್ರಷ್ಟರಿಗೆ ಈ ರೀತಿ ತಕ್ಕ ಪಾಟ ಆಗಲೇಬೇಕೆಂದಿದ್ದಾರೆ.