ಉಡುಪಿಯಲ್ಲಿ ಎರಡು ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 83ಕ್ಕೇರಿಕೆ

ಉಡುಪಿಯಲ್ಲಿ ಇಂದು ಎರಡು ಹೊಸ  ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ
ಉಡುಪಿ ಜಿಲ್ಲಾಸ್ಪತ್ರೆ
ಉಡುಪಿ ಜಿಲ್ಲಾಸ್ಪತ್ರೆ
Updated on

ಉಡುಪಿ :  ಉಡುಪಿಯಲ್ಲಿ ಇಂದು ಎರಡು ಹೊಸ  ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ

ಉಡುಪಿ ಸಮೀಪದ ಬಡಗುಬೆಟ್ಟು ಗ್ರಾಮದ 29 ವರ್ಷ ಪ್ರಾಯದ ಯುವಕ  ಹಾಗೂ 35 ವರ್ಷ ಪ್ರಾಯದ ಮಣಿಪುರ ರಾಜ್ಯದ ಯುವಕನಲ್ಲಿ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಮಣಿಪುರದ ಯುವಕ ಕಾರ್ಕಳದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರೆ, ಇನ್ನೊಬ್ಬ ಯುವಕ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿನ ಪರೀಕ್ಷೆಗೆ ದಾಖಲಾಗಿದ್ದ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com