ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆತಂಕ ಹೆಚ್ಚಿಸಿದ ಆರೋಗ್ಯ ಇಲಾಖೆ ಅಧ್ಯಯನ ವರದಿ: ರೋಗ ಲಕ್ಷಣಗಳಿಲ್ಲದವರಲ್ಲಿ ಕೊರೊನಾ?!

ರಾಜ್ಯಾದ್ಯಂತ ಕೊರೊನಾ ವೈರಸ್ ಅಟ್ಟಹಾಸದಿಂದ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲಂತೂ ಲಾಕ್‌ಡೌನ್‌ ಇದ್ದರೂ ಕೊರೊನಾ ವೈರಸ್‌ಗೆ ಕ್ಯಾರೆ ಎನ್ನದಂತೆ ಜನರು ಬೀದಿಗೆ ಇಳಿದಿದ್ದಾರೆ.
Published on

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ವೈರಸ್ ಅಟ್ಟಹಾಸದಿಂದ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲಂತೂ ಲಾಕ್‌ಡೌನ್‌ ಇದ್ದರೂ ಕೊರೊನಾ ವೈರಸ್‌ಗೆ ಕ್ಯಾರೆ ಎನ್ನದಂತೆ ಜನರು ಬೀದಿಗೆ ಇಳಿದಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಂಕು ಹರಡುವ ಕುರಿತು ಬಿಡುಗಡೆ ಮಾಡಿರುವ ಅಧ್ಯಯನ ವರದಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಶಂಕಿತ ಅಥವಾ ಸೋಂಕಿತರೊಂದಿಗೆ ಸಂಪರ್ಕ ಇಲ್ಲದವರಲ್ಲಿ ಸೋಂಕು ಪತ್ತೆಯಾಗುತ್ತಿವೆ.ಬಹಳಷ್ಟು ಸೋಂಕಿ ತರಲ್ಲಿ ಯಾವುದೇ ರೋಗಲಕ್ಷಣಗಳು ಕಂಡು ಬರುತ್ತಿಲ್ಲ.ಇದಲ್ಲದೆ ರಾಜ್ಯದಲ್ಲಿ ಈಗಾಗಲೇ 31 ಜನರು ಕೊರೊ ನಾ ವೈರಸ್ ಮಹಾಮಾರಿಗೆ ಬಲಿಯಾಗಿದ್ದಾರೆ.ಹಲವರಿಗೆ ಕೊನೆಯ ಹಂತದಲ್ಲಿ ರೋಗ ಪತ್ತೆಯಾಗಿದ್ದರೆ,ಕೆಲವು ಸೋಂಕಿತರು ಮೃತಪಟ್ಟ ಮೇಲೆ ಕೊರೊನಾ ಸೋಂಕು ಇರುವುದು ಗೊತ್ತಾಗಿದೆ.ಈ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿರುವ ರಾಜ್ಯ ಆರೋಗ್ಯ ಇಲಾಖೆ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಸೋಂಕಿತರ ಸಂಪರ್ಕವಿಲ್ಲದಿದ್ದರೂ ಕೊರೊನಾ
ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಸೋಂಕಿತರ ಸಂಪರ್ಕವಿಲ್ಲದವರಲ್ಲಿ ಕೊರೊನಾ ವೈರಸ್ ದೃಢಪಡುತ್ತಿದೆ. ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಬಹಳಷ್ಟು ಸಡಲಿಕೆಗಳನ್ನು ಕೊಟ್ಟಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.ಆದರೆ ಇದೀಗ ದೃಢಪಡುತ್ತಿರುವ ಪ್ರಕರಣಗಳ ಲ್ಲಿ ಬಹಳಷ್ಟು ಜನರು ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ.ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧ್ಯಯನ ನಡೆಸಿದೆ.ಆಗ ಕಂಡು ಬಂದಿರುವುದು ರೋಗಲಕ್ಷಣಗಳಿಲ್ಲದ ಸೋಂಕಿತರಲ್ಲಿ ಸೋಂಕು ಪತ್ತೆಯಾಗುತ್ತಿರುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com