ಆರು ದಶಕದ ದಾಂಪತ್ಯ ಜೀವನ ನಡೆಸಿ ಸಾವಲ್ಲೂ ಒಂದಾದ ಜೀವಿಗಳು 

ಆರು ದಶಕಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿ ಮನೆ ತುಂಬಾ ಮಕ್ಕಳು, ಮರಿ, ಮೊಮ್ಮಕ್ಕಳನ್ನು ಕಂಡಿದ್ದ  ಇಬ್ಬರು ಸಾವಲ್ಲೂ ಒಂದಾಗಿ ಅರ್ಥಕತೆ ಮೆರೆದ ಬಘಟನೆ ಕನಕಗಿರಿಯಲ್ಲಿ ನಡೆದಿದೆ.
ಸಾವಲ್ಲೂ ಒಂದಾದ ದಂಪತಿಗಳು
ಸಾವಲ್ಲೂ ಒಂದಾದ ದಂಪತಿಗಳು
Updated on: 

ಗಂಗಾವತಿ: ಆರು ದಶಕಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿ ಮನೆ ತುಂಬಾ ಮಕ್ಕಳು, ಮರಿ, ಮೊಮ್ಮಕ್ಕಳನ್ನು ಕಂಡಿದ್ದ ಇಬ್ಬರು ಸಾವಲ್ಲೂ ಒಂದಾಗಿ ಅರ್ಥಕತೆ ಮೆರೆದ ಬಘಟನೆ ಕನಕಗಿರಿಯಲ್ಲಿ ನಡೆದಿದೆ.

ಕನಕಗಿರಿ ಪಟ್ಟಣದ ಮಂಡಳ ಪಂಚಾಯತಿಯ ಮಾಜಿ ಚೇರ್ಮನ್  ಜಂಗಮ ಸಮಾಜದ ಮುಖಂಡ ಕೆ. ಮಹಾಬಳೇಶ್ವರ ಸ್ವಾಮಿ ಹಾಗೂ ಅವರ ಪತ್ನಿ ಪ್ರಭಾವತಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. 

ಈ ಮೂಲಕ ಆದರ್ಶ ಜೀವನ ನಡೆಸಿದ ಈ ಇಬ್ಬರು, ಒಂದೇ ದಿನಕ್ಕೆ ಇಹಲೋಕ ತ್ಯಜಿಸಿರುವುದು ಕುಟುಂಬ ವರ್ಗವನ್ನು ಶೋಕದ ಕಡಲಲ್ಲಿ ಮುಳುಗುವಂತೆ ಮಾಡಿದೆ.

ನಸುಕಿನ ಜಾವ ಹನ್ನೆರಡುವರೆಗೆ ಪತ್ನಿ ಪ್ರಭಾವತಿ (78) ಹೃದಯಾಘಾತದಿಂದ ಸಾವನ್ನಪ್ಪಿದರು. ಬೆಳಗ್ಗೆ ಐದುವರೆಗೆ ಪತ್ನಿ ವಿಯೋಗದ ಸುದ್ದಿ ತಿಳಿದ ಮಹಾಬಳೇಶ್ವರ ಸ್ವಾಮಿ (86) ಕೂಡ ಕುಸಿದು ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವರದಿ: ಶ್ರೀನಿವಾಸ್ ಎಂ ಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com