ತೀವ್ರ ಸೋಂಕುಳ್ಳ ರಾಜ್ಯಗಳಿಂದ ಆಗಮಿಸುವವರು ಸ್ವಂತ ಖರ್ಚಿನಲ್ಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು: ಸರ್ಕಾರ ಆದೇಶ

ತೀವ್ರ ಸೋಂಕುಳ್ಳ ರಾಜ್ಯಗಳಿಂದ ವಿಮಾನ ಹಾಗೂ ರೈಲುಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತೀವ್ರ ಸೋಂಕುಳ್ಳ ರಾಜ್ಯಗಳಿಂದ ವಿಮಾನ ಹಾಗೂ ರೈಲುಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ. 

ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಇದೂವರೆಗೂ ಸರ್ಕಾರದ ವತಿಯಿಂದ ಗಂಟಲು ದ್ರವ ಸಂಗ್ರಹಿಸಿ ಉಚಿತ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಇದೀಗ ತೀವ್ರ ಸೋಂಕುಳ್ಳ ರಾಜ್ಯಗಳಿಂದ ಬರುವ ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲೇ ಅಂದರೆ, ಪ್ರತೀಯೊಬ್ಬರೂ ಪರೀಕ್ಷೆಗೆ ರೂ.650 ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದೆ. 

ಪ್ರಕಟಣೆಯ ಅಂಶಗಳು ಇಂತಿವೆ...
ಕೊರೋನಾ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಗೊಳಿಸುವ ವಿಚಾರದಲ್ಲಿ ಬಿಬಿಎಂಪಿ, ಬೆಂಗಳೂರು ನಗರ ಮತ್ತು ಉಳಿದ ಎಲ್ಲಾ ಜಿಲ್ಲೆಗಳ ಸಾಮರ್ಥ್ಯದಲ್ಲಿ ಪರಿಮಿತಿ ಇರುತ್ತದೆ. ಕೊರೋನಾ ಸಂಕಷ್ಟದಲ್ಲಿರುವ ರಾಜ್ಯಗಳಿಂದ ಆಗಮಿಸುವವರು ಪ್ರಯಾಣಿಕರೆಲ್ಲರನ್ನೂ ಹೋಟೆಲ್ ಹಾಗೂ ವಸತಿ ಗೃಹಗಳಲ್ಲಿ 7 ದಿನಗಳ ಕಾಲ ಕ್ವಾರಂಟೈನ್'ಗೆ ಒಲಪಡಿಸಲು ಸಾಧ್ಯವಾಗುವುದಿಲ್ಲ, ಕಾರಣವೇನೆಂದರೆ ಹೋಟೆಲ್ ಹಾಗೂ ವಸತಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನೇಕ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿಗಿರುತ್ತಾರೆ. 

ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಒಳಪಡುವ ಕೆಲವು ವಿಶಿಷ್ಟ ಗುಂಪಿನ ಪ್ರಯಾಣಿಕರನ್ನು ಮಾತ್ರ ಪ್ರಯೋಗಶಾಲೆ ಪರೀಕ್ಷೆ ಮಾಡುವ ನಿರ್ಣಯವನ್ನು ರಾಜ್ಯ ಕೈಗೊಂಡಿದೆ. ಈ ಮೂಲಕ ಕೋವಿಡ್ ಶಂಕಿತರನ್ನು ಶೀಘ್ರಗತಿಯಲ್ಲಿ ಪರೀಕ್ಷೆ ಮಾಡಲು ಖಾಸಗಿ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ.

ಇತ್ತೀಚೆಗೆ ಅವರೊಂದಿಗೆ ನಡೆಸಿದ ವಿಮಾನ ಮತ್ತು ರೈಲುಗಳ ಮುಖಾಂತರ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ಪ್ರಸಕ್ತ ರಾಜ್ಯ ಸರ್ಕಾರದ ಪರೀಕ್ಷಾ ನೀತಿಯಂತೆ ಕೋವಿಡ್-19ರ ಆರ್'ಟಿ-ಪಿಸಿಆರ್ ಪರೀಕ್ಷೆ ನಡೆಸಿ 24 ಗಂಟೆಯ ಒಳಗಾಗಿ ಫಲಿತಾಂಶ ನೀಡುವ ಸಾಮರ್ಥ್ಯ ಮತ್ತು ಸನ್ನದ್ಧತೆ ಕುರಿತು ಕಾಸಗಿ ಪ್ರಯೋಗ ಶಾಲೆಗಳೊಂದಿಗೆ ಚರ್ಚೆ ನಡೆಸಲಾಗಿರುತ್ತದೆ. ಪ್ರಯೋಗಾಲಯ ಪರೀಕ್ಷೆಗಳ ಕುರಿತು ಆರೋಗ್ಯ ಇಲಾಖೆಯ ಪ್ರಸ್ತಾವನೆಗಳನ್ನು ಸದರಿ ಖಾಸಗಿ ಪ್ರಯೋಗ ಶಾಲೆಗಳು ಒಪ್ಪಿರುತ್ತಾರೆ. 

ಗಂಟಲು, ರಕ್ತದ ಮಾದರಿಗಳನ್ನು ಪೊಲಿಂಗ್ ವಿಧಾನದಲ್ಲಿ ಪರೀಕ್ಷಿಸಲು ಶುಕ್ರವಾಗಿ ಪ್ರತಿ ಯಾತ್ರಿಕರಿಂದ, ಫಲಿತಾಂಶ ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿ ತಲಾ ರೂ.650 ಶುಲ್ಕವನ್ನು ಖಾಸಗಿ ಲ್ಯಾಬ್'ಗಳು ಪಡೆಯತಕ್ಕದ್ದು ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com