ರಾಜ್ಯ

2 ತಿಂಗಳ ಬಳಿಕ ರಾಜ್ಯದಲ್ಲಿ ದಾಖಲೆಯ ಅತೀ ಕಡಿಮೆ ಕೊರೋನಾ ಪ್ರಕರಣ ಪತ್ತೆ, 8 ಲಕ್ಷ ದಾಟಿದ ಚೇತರಿಕೆ!

2 ತಿಂಗಳ ಬಳಿಕ ರಾಜ್ಯದಲ್ಲಿ ದಾಖಲೆಯ ಅತೀ ಕಡಿಮೆ ಕೊರೋನಾ ಪ್ರಕರಣ ಪತ್ತೆ, 8 ಲಕ್ಷ ದಾಟಿದ ಚೇತರಿಕೆ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಇನ್ನಷ್ಟು ಕಡಿಮೆಯಾಗಿದ್ದು ಇಂದು ಬೆಂಗಳೂರಿನಲ್ಲಿ 978 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 1,963 ಕೊರೋನಾ ಪ್ರಕರಣ ಪತ್ತೆಯಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 1,963 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 8,48,850ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯದಲ್ಲಿ ಇಂದು 19 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,410ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು 2,686 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 8,04,485ಕ್ಕೆ ಏರಿಕೆಯಾಗಿದೆ. 32,936 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 978 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,50,305ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 5 ಮಂದಿ ಸಾವನ್ನಪ್ಪಿದ್ದಾರೆ.

ಬಾಗಲಕೋಟೆಯಲ್ಲಿ 22, ಬಳ್ಳಾರಿಯಲ್ಲಿ 37, ಬೆಳಗಾವಿಯಲ್ಲಿ 34, ಬೆಂಗಳೂರು  ಗ್ರಾಮಾಂತರದಲ್ಲಿ 93, ಬೀದರ್ ನಲ್ಲಿ 3, ಚಾಮರಾಜನಗರದಲ್ಲಿ 12,  ಚಿಕ್ಕಬಳ್ಳಾಪುರದಲ್ಲಿ 56, ಚಿಕ್ಕಮಗಳೂರಿನಲ್ಲಿ 7, ಚಿತ್ರದುರ್ಗದಲ್ಲಿ 69, ದಕ್ಷಿಣ ಕನ್ನಡದಲ್ಲಿ 18, ದಾವಣಗೆರೆಯಲ್ಲಿ 19, ಧಾರವಾಡದಲ್ಲಿ 33, ಗದಗದಲ್ಲಿ 4, ಹಾಸನದಲ್ಲಿ 48, ಹಾವೇರಿಯಲ್ಲಿ 13, ಕಲಬುರಗಿಯಲ್ಲಿ 34, ಕೊಡಗಿನಲ್ಲಿ 14 ಪ್ರಕರಣಗಳು ವರದಿಯಾಗಿವೆ.

ಕೋಲಾರದಲ್ಲಿ 52, ಕೊಪ್ಪಳದಲ್ಲಿ 16, ಮಂಡ್ಯದಲ್ಲಿ 73, ಮೈಸೂರಿನಲ್ಲಿ 95,  ರಾಯಚೂರಿನಲ್ಲಿ 20, ರಾಮನಗರದಲ್ಲಿ 3, ಶಿವಮೊಗ್ಗದಲ್ಲಿ 28, ತುಮಕೂರಿನಲ್ಲಿ 65,  ಉಡುಪಿಯಲ್ಲಿ 29, ಉತ್ತರಕನ್ನಡದಲ್ಲಿ 47, ವಿಜಯಪುರದಲ್ಲಿ 38,  ಯಾದಗಿರಿಯಲ್ಲಿ 3 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.