ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 6 ಕಿ.ಮೀ. ಕಾರು ಹಿಂಬಾಲಿಸಿ ಉದ್ಯಮಿಯ ದರೋಡೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

 ಆರು ಕಿ.ಮೀ ಉದ್ಯಮಿಯೊಬ್ಬರ ಕಾರನ್ನು ಹಿಂಬಾಲಿಸಿದ ಆರು ಜನರ ತಂಡ 6 ಲಕ್ಷ ರೂ. ಮೌಲ್ಯದ ರೊಲ್ಯಾಕ್ಸ್ ವಾಚ್ ದರೋಡೆ ಮಾಡುವ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.

ಬೆಂಗಳೂರು: ಆರು ಕಿ.ಮೀ ಉದ್ಯಮಿಯೊಬ್ಬರ ಕಾರನ್ನು ಹಿಂಬಾಲಿಸಿದ ಆರು ಜನರ ತಂಡ 6 ಲಕ್ಷ ರೂ. ಮೌಲ್ಯದ ರೊಲ್ಯಾಕ್ಸ್ ವಾಚ್ ದರೋಡೆ ಮಾಡುವ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಉದ್ಯಮಿಯ ಆರು ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ಬುಕ್ ದರೋಡೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನ. 11ರಂದು ಕೇರಳ ಮೂಲದ ಉದ್ಯಮಿ ಸಮೀಲ್ ಎಂಬುವರು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಹಣ ಜಮಾ ಮಾಡಲು ತೆರಳಿದ್ದರು. ಈ ವೇಳೆ ಬ್ಯಾಂಕ್ ಅವಧಿ ಮುಗಿದಿದ್ದರಿಂದ ಹಣವನ್ನು ವಾಪಸ್ ಕಾರಿನಲ್ಲಿಟ್ಟುಕೊಂಡು ಕಮ್ಮನಹಳ್ಳಿ ಕಡೆ ಬರುತ್ತಿದ್ದರು.

ಮೂರು ದ್ವಿಚಕ್ರ ವಾಹನಗಳಲ್ಲಿ ಆರು ಜನ ದರೋಡೆಕೋರರು ಉದ್ಯಮಿ ಕಾರನ್ನು ಆರು ಕಿಲೋಮೀಟರ್ವರೆಗೆ ಹಿಂಬಾಲಿಸಿದ್ದಾರೆ.‌ ನಂತರ ಕಮ್ಮನಹಳ್ಳಿಯ ರೆಸ್ಟೋರೆಂಟ್‌ ಬಳಿ ಊಟಕ್ಕೆಂದು ಸಮೀಲ್ ಕಾರು ನಿಲ್ಲಿಸಿದ್ದಾರೆ. ಈ ವೇಳೆ ದರೋಡೆಕೋರರು ಕಾರಿನಲ್ಲಿ ಯಾರೊಬ್ಬರೂ ಇಲ್ಲದಿರುವುದನ್ನು ಗಮನಿಸಿ ಕಾರಿನ ಗಾಜು ಒಡೆದು ಬ್ಯಾಗ್ನಲ್ಲಿದ್ದ ಆರು ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಕಳವು ಮಾಡಿ ಪರಾರಿಯಾಗಿದ್ದಾರೆ.

ಘಟನೆ ಈ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ‌ ಸಮೀಲ್ ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸಿಸಿಟಿವಿ ಆಧರಿಸಿ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com