ರಾಜ್ಯ

ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸಲು ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಬಿಎಂಟಿಸಿ

ನರರೋಗ, ಮಾನಸಿಕ ಒತ್ತಡಕ್ಕೊಳಗಾದ ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೈಜೋಡಿಸಿದೆ.

ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸಲು ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಬಿಎಂಟಿಸಿ
ಬಿಎಂಟಿಸಿ
Published On :

ಬೆಂಗಳೂರು: ನರರೋಗ, ಮಾನಸಿಕ ಒತ್ತಡಕ್ಕೊಳಗಾದ ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೈಜೋಡಿಸಿದೆ. 

ಬಿಎಂಟಿಸಿ ಅಧ್ಯಕ್ಷೆ ನಂದೀಶಾ ರೆಡ್ಡಿ ಮತ್ತು ನಿಮ್ಹಾನ್ಸ್ ನಿರ್ದೇಶಕ ಗಂಗಾಧರ್ ಗುರುವಾ ಒಡಂಬಡಿಕೆಯ ಜ್ಞಾಪಕ ಪತ್ರಕ್ಕೆ ಸಹಿಹಾಕಿದರು. 

ಮೂರು ವರ್ಷಗಳಿಗೆ ಒಪ್ಪಂದವಾಗಿದ್ದು, ಅಗತ್ಯವೆನಿಸಿದರೆ, ಈ ಅವಧಿಯನ್ನು ವಿಸ್ತರಿಸಬಹುದು, ನವೀಕರಣಗೊಳಿಸಬಹುದಾಗಿದೆ. 

ಸಾರಿಗೆ ಸಿಬ್ಬಂದಿಗಳ ಆರೈಕೆ, ರೋಗಿಗಳಿಗೆ ಚಿಕಿತ್ಸೆ ನೀಡುವುದು, ವೈದ್ಯಕೀಯ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳು ಒಪ್ಪಂದದಲ್ಲಿವೆ. 

ಒಪ್ಪಂದಗಳ ಕುರಿತು ಇನ್ನೂ ಸಾಕಷ್ಟು ಕೆಲಸಗಳಿವೆ. ಬಿಎಂಟಿಸಿ ಸಿಬ್ಬಂದಿಗಳ ಮಾನಸಿಕ ಸಮಸ್ಯೆ, ಮದ್ಯ ವ್ಯಸನ ಸೇರಿದಂತೆ ಸಿಬ್ಬಂದಿಗಳ ಆರೋಗ್ಯದ ಆರೈಕೆ ಕುರಿತು ನಿಮ್ಹಾನ್ಸ್ ಅಧ್ಯಯನ ನಡೆಸಲಿದೆ ಎಂದು ಬಿಎಂಟಿಸಿ ನಿರ್ದೇಶಕ ಡಾ.ಅರುಣ್ ಕೆ ಅವರು ಹೇಳಿದ್ದಾರೆ. 

ಚಿಕಿತ್ಸೆಯಲ್ಲಿ ಸಬ್ಸಿಡಿ ನೀಡುವ ಪರಿಶೀಲನೆಗಳು ನಡೆಯುತ್ತಿವೆ. ಸಿಬ್ಬಂದಿಗಳಿಗೆ ಆದ್ಯತೆಯ ಸೇವೆಗಳನ್ನು ಒದಗಿಸಲಾಗುತ್ತದೆ. ನಿಮ್ಹಾನ್ಸ್ ನಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಬ್ಸಿಡಿ ನೀಡುವ ಕುರಿತಂತೆಯೂ ಪರಿಶೀಲನೆಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.