ಸಚಿವ ಸಿ.ಟಿ.ರವಿ ರಾಜೀನಾಮೆ ಅಂಗೀಕರಿಸದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ಸಿಟಿ ರವಿ ಸಲ್ಲಿಸಿದ್ದ ರಾಜಿನಾಮೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅಂಗೀಕರಿಸಿಲ್ಲ ಎಂದು ತಿಳಿದುಬಂದಿದೆ.
ಸಿಟಿರವಿ ಮತ್ತು ಬಿಎಸ್ ವೈ
ಸಿಟಿರವಿ ಮತ್ತು ಬಿಎಸ್ ವೈ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ಸಿಟಿ ರವಿ ಸಲ್ಲಿಸಿದ್ದ ರಾಜಿನಾಮೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅಂಗೀಕರಿಸಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಒಬ್ಬರಿಗೆ ಒಂದೆ ಹುದ್ದೆ ಅಥವಾ ಸ್ಥಾನವೆಂಬ ಬಿಜೆಪಿ ಅಲಿಖಿತ ನಿಯಮದಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನೆಲೆ, ಸಿ.ಟಿ.ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿ.ಟಿ.ರವಿ ಅವರು ಕನ್ನಡ ಮತ್ತು  ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು.

ನಿನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಕಾವೇರಿಯಲ್ಲಿ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.ಈ ಮೊದಲು ಸಿ.ಟಿ.ರವಿ ಅವರು ಅಕ್ಟೋಬರ್ 2ರ ಗಾಂಧಿ ಜಯಂ ತಿಯಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಚಿಕ್ಕಮಗಳೂರಿನಿನಲ್ಲಿ ಘೋಷಿಸಿದ್ದರು. ಸಿಟಿ ರವಿ  ಅವರ ರಾಜೀನಾಮೆಯನ್ನು ಮುಖ್ಯಮಂಮಂತ್ರಿ ಯಡಿಯೂರಪ್ಪ ಇನ್ನೂ ಅಂಗೀಕರಿಸಿಲ್ಲ ಎನ್ನಲಾಗಿದೆ. ನಾಳೆ ಅಂದರೆ ಅ.5ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.ಜೊತೆಗೆ ಅಕ್ಟೋಬರ್ 5 ಮತ್ತು 6 ರಂದು ದೆಹಲಿಯಲ್ಲಿ ಪಕ್ಷದ  ಸಂಘಟನಾ ಆಯೋಜಿಸಲಾಗಿದ್ದು ಸಭೆಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

ಸಿ.ಟಿ.ರವಿ ನೇಮಕಾತಿ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ,ಪುನಾರಚನೆಗೆ ಬಗ್ಗೆ ಪಕ್ಷದ ವಲಯ ದಲ್ಲಿ ಚೆರ್ಚೆ ಆರಂಭವಾಗಿದೆ.ಮತ್ತೊಂದೆಡೆ ನಾಯಕತ್ವ ಬದಲಾವಣೆ ಚೆರ್ಚೆಯೂ ಬಿರುಸಾಗಿ ಸಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com