ರಾಜ್ಯ

ಕೊರೋನಾಗೆ ನಲುಗಿದ ಕರ್ನಾಟಕ: ಬೆಂಗಳೂರಿನಲ್ಲಿ 5,121 ಸೇರಿ ರಾಜ್ಯದಲ್ಲಿ 10,704 ಮಂದಿಗೆ ಪಾಸಿಟಿವ್!

ಕೊರೋನಾಗೆ ನಲುಗಿದ ಕರ್ನಾಟಕ: ಬೆಂಗಳೂರಿನಲ್ಲಿ 5,121 ಸೇರಿ ರಾಜ್ಯದಲ್ಲಿ 10,704 ಮಂದಿಗೆ ಪಾಸಿಟಿವ್!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು 10,704 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,79,356ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 101 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9,675ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 5,121 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 2,67,362ಕ್ಕೆ ಏರಿಕೆಯಾಗಿದೆ.

ಇಂದು 9,613 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 5,52,519ಕ್ಕೆ ಏರಿಕೆಯಾಗಿದೆ. 1,17,143 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು 5121, ಬಾಗಲಕೋಟೆಯಲ್ಲಿ 98, ಬಳ್ಳಾರಿಯಲ್ಲಿ 248, ಬೆಳಗಾವಿಯಲ್ಲಿ 185, ಬೆಂಗಳೂರು ಗ್ರಾಮಾಂತರದಲ್ಲಿ 368, ಬೀದರ್ ನಲ್ಲಿ 27, ಚಾಮರಾಜನಗರದಲ್ಲಿ 68, ಚಿಕ್ಕಬಳ್ಳಾಪುರದಲ್ಲಿ 100, ದಕ್ಷಿಣ ಕನ್ನಡದಲ್ಲಿ 296, ಗದಗದಲ್ಲಿ 42, ಕಲಬುರಗಿಯಲ್ಲಿ 128, ಕೊಡಗಿನಲ್ಲಿ 94, ಕೋಲಾರದಲ್ಲಿ 129, ಕೊಪ್ಪಳದಲ್ಲಿ 97, ರಾಯಚೂರಿನಲ್ಲಿ 111, ರಾಮನಗರದಲ್ಲಿ 91, ವಿಜಯಪುರದಲ್ಲಿ 110, ಯಾದಗಿರಿಯಲ್ಲಿ 67 ಪ್ರಕರಣಗಳು ವರದಿಯಾಗಿವೆ.

ಚಿಕ್ಕಮಗಳೂರಿನಲ್ಲಿ 142, ಚಿತ್ರದುರ್ಗದಲ್ಲಿ 215, ದಕ್ಷಿಣ ಕನ್ನಡದಲ್ಲಿ 296, ದಾವಣಗೆರೆಯಲ್ಲಿ 238, ಧಾರವಾಡದಲ್ಲಿ 121, ಹಾಸನದಲ್ಲಿ 441, ಹಾವೇರಿಯಲ್ಲಿ 108, ಮಂಡ್ಯದಲ್ಲಿ 206, ಮೈಸೂರಿನಲ್ಲಿ 642, ಶಿವಮೊಗ್ಗದಲ್ಲಿ 250, ತುಮಕೂರಿನಲ್ಲಿ 509, ಉಡುಪಿಯಲ್ಲಿ 239, ಉತ್ತರಕನ್ನಡದಲ್ಲಿ 213 ಪ್ರಕರಣಗಳು ವರದಿಯಾಗಿವೆ ಎಂದು ಆರೊಗ್ಯ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.