ರಾಜ್ಯದಲ್ಲಿ ಕೊರೋನಾ ಅಬ್ಬರ: ಇಂದು 10,913 ಹೊಸ ಪ್ರಕರಣ; ಚೇತರಿಕೆ, ಸೋಂಕು ಪತ್ತೆ ಪ್ರಮಾಣದಲ್ಲೂ ಹೆಚ್ಚಳ

ರಾಜ್ಯದಲ್ಲಿ ಒಂದೆಡೆ ಕೊರೋನಾ ಪ್ರಕರಣಗಳ ವ್ಯಾಪಕವಾಗಿ ಹಬ್ಬಿತ್ತಿರುವಂತೆಯೇ ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೋನಾ ಪ್ರಕರಣಗಳ ವ್ಯಾಪಕವಾಗಿ ಹಬ್ಬಿತ್ತಿರುವಂತೆಯೇ ಮತ್ತೊಂದೆಡೆ ಗುಣಮುಖರಾಗುತ್ತಿರುವವರ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಇಂದು 9091 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಒಟ್ಟು ಸಂಖ್ಯೆ 5,61,610 ಆಗಿದೆ.

ಇಂದು 10,913 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 690269 ಆಗಿದೆ. ಒಟ್ಟು 11,88,51 ಸಕ್ರಿಯ ಪ್ರಕರಣಗಳಿವೆ.ಇಂದು ಕೋವಿಡ್-19 ಸೋಂಕಿನಿಂದ 114 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 9789 ಆಗಿದೆ.ಅನ್ಯ ಕಾರಣದಿಂದ 19 ಮಂದಿ ಮೃತಪಟ್ಟಿದ್ದಾರೆ.

ಇಂದು 49618 ರಾಪಿಡ್ ಅಂಟಿಜಿನ್ ಟೆಸ್ಟ್ , 60362 ಆರ್ ಟಿಪಿಸಿಆರ್  ಟೆಸ್ಟ್ ಗಳನ್ನು ಮಾಡಲಾಗಿದ್ದು, ಒಟ್ಟಾರೇ ಟೆಸ್ಟ್ ಗಳ ಸಂಖ್ಯೆ 10 ಲಕ್ಷದ 99 ಸಾವಿರದ 80 ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com