

ಬೆಂಗಳೂರು: ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 7 ಲಕ್ಷ ತಲುಪಿದೆ. ಈ ನಡುವೆ, ರಾಜ್ಯದ ಸಕ್ರಿಯ ಪ್ರಕರಣಗಳು ಕೂಡ 1.20 ಲಕ್ಷ ತಲುಪಿದೆ. ಕಳೆದ 24 ಗಂಟೆಗಳಲ್ಲಿ 10517 ಹೊಸ ಪ್ರಕರಣ ಪತ್ತೆಯಾಗಿವೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 700786 ಆಗಿದೆ.
ಇಂದು 8337 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟಾರೇ ಬಿಡುಗಡೆಯಾದವರ ಸಂಖ್ಯೆ ಸಂಖ್ಯೆ 569947 ಆಗಿದೆ. 102 ಸೋಂಕಿತರು ಮೃತಪಡುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 9891 ಆಗಿದೆ.120929 ಸಕ್ರೀಯ ಪ್ರಕರಣಗಳಾಗಿವೆ.
ಇಂದು 48403 ರಾಪಿಡ್ ಅಂಟಿಜಿನ್ ಪತ್ತೆ ಪರೀಕ್ಷೆ ಮತ್ತು 64367 ಆರ್ ಟಿಪಿಸಿಆರ್ ಪರೀಕ್ಷೆ ಸೇರಿದಂತೆ ಒಟ್ಟಾರೇ 1 ಲಕ್ಷದ 12 ಸಾವಿರದ 770 ಪರೀಕ್ಷೆ ನಡೆಸಲಾಗಿದೆ.
ಜಿಲ್ಲಾವಾರು ಕೊರೋನಾ ಪ್ರಕರಣಗಳ ಸಂಖ್ಯೆ ಇಂತಿದೆ.