ರಾಜ್ಯ

ಹದಿಹರಯದವರ ಆರೋಗ್ಯ ಕುರಿತು ವಿಷಯ ಪ್ರತಿಪಾದಿಸಿದ ಮೈಸೂರಿನ ಬಾಲೆ!

ಹದಿಹರಯದವರ ಆರೋಗ್ಯ ಕುರಿತು ವಿಷಯ ಪ್ರತಿಪಾದಿಸಿದ ಮೈಸೂರಿನ ಬಾಲೆ!
ಶುಕ್ತಿ ಅನಂತ
Published On :

ಮೈಸೂರು: ಕೋವಿಡ್- ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಮತ್ತು ಹದಿಹರದೆಯವರ ಆರೋಗ್ಯ ಸಮಸ್ಯೆ  ಕುರಿತು ಇತ್ತೀಚಿಗೆ ನಡೆದ ಅಕೌಂಟಬಿಲಿಟಿ ಬ್ರೇಕ್ ಫಾಸ್ಟ್ 2020 ಕಾರ್ಯಕ್ರಮದಲ್ಲಿ ಮೈಸೂರಿನ ಶುಕ್ತಿ ಅನಂತ (17)  ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಬಗ್ಗೆ  ಮನಮುಟ್ಟುವಂತೆ ಭಾಷಣ ಮಾಡಿದರು.

ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಮತ್ತು ಹಕ್ಕುಗಳನ್ನು ರಕ್ಷಿಸಲು ಜಾಗತಿಕ ಹೊಣೆಗಾರಿಕೆಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮೈಸೂರಿನ ವಿದ್ಯಾಶ್ರಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶುಕ್ತಿ, ಹದಿಹರಯದವರ ಆರೋಗ್ಯ ಸಮಸ್ಯೆಗಳ  ಬಗ್ಗೆ ಚೆನ್ನಾಗಿ ಬಲ್ಲವರಾಗಿದ್ದು, ನೀತಿ ಪ್ರಕ್ರಿಯೆಗಳಲ್ಲಿ ಯುವಕರ ನೇತೃತ್ವದ ಹೊಣೆಗಾರಿಕೆಯ ತತ್ವಗಳನ್ನು ಅವರು ಬಲವಾಗಿ ನಂಬುತ್ತಾರೆ.

ಹದಿಹರೆಯದ ಆರೋಗ್ಯ ವಕಾಲತ್ತು ಕುರಿತು, ರಾಷ್ಟ್ರವ್ಯಾಪಿ ಸ್ವಾಯತ್ತ ಯುವ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶುಕ್ತಿ, ಹದಿಹರೆಯದವರ ಆರೋಗ್ಯ ಸಮಸ್ಯೆಗಳು, ಇತರ ಸಂಬಂಧಿತ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಪ್ರಸ್ತುತತೆ, ಮಾನಸಿಕ ಆರೋಗ್ಯ ಮತ್ತಿತರ ವಿಭಿನ್ನ ವಿಷಯಗಳ ಬಗ್ಗೆ ಓದುವುದರಲ್ಲಿ ಹಾಗೂ ಬರೆಯುವುದರಲ್ಲಿ ಆಕೆಗೆ ಆಸಕ್ತಿ ಹೆಚ್ಚು.

ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಬಗ್ಗೆ ಶಿಕ್ಷಣ ಅಥವಾ ಪೋಷಕರ ಮೂಲಕ ಚಿಕ್ಕ ವಯಸ್ಸಿನಲ್ಲಿ ಗಮನ ಹರಿಸಬೇಕಾದದ್ದು ಬಹಳ ಮುಖ್ಯವಾಗಿದೆ. ಏಕೆಂದರೆ ಅನೇಕ ಯುವಜನರಿಗೆ ಇದರ ಮಹತ್ವ ತಿಳಿದಿಲ್ಲ. ಯುವಜನರಿಗೆ ಮಾನಸಿಕ ಆರೋಗ್ಯ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ, ಅಪೌಷ್ಟಿಕತೆ ಮತ್ತು ಮುಂತಾದವುಗಳ ಬಗ್ಗೆ ತಿಳಿದಿಲ್ಲ ಎಂದು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಾಂಕ್ರಾಮಿಕ ಕಾಯಿಲೆಯಿಂದ ಮಾನಸಿಕ, ದೈಹಿಕ, ಸಾಮಾಜಿಕ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಹದಿಹರೆಯದವರು ಎದುರಿಸುತ್ತಿದ್ದಾರೆ.ಇದು ಅವರ ದಿನನಿತ್ಯದ ಬದುಕಿನ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತಿದೆ.ಮಾನಸಿಕ ಆರೋಗ್ಯ ಸಮಸ್ಯೆಗಳಾದ ಖಿನ್ನತೆ, ಆತ್ಮಹತ್ಯೆ, ಅನೇಕ ಮಕ್ಕಳಿಗೆ ಮಧ್ಯಾಹ್ನದ ಊಟ ಸಹ ಸಿಗದಿರುವಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.