ರೈತರ ವಿರುದ್ಧ ಅವಹೇಳನಕಾರಿ ಟ್ವೀಟ್: ತುಮಕೂರಿನಲ್ಲಿ ನಟಿ ಕಂಗನಾ ವಿರುದ್ಧ ಎಫ್ಐಆರ್

ರೈತರ ವಿರುದ್ಧ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶದಂತೆ ದೂರು ದಾಖಲಾಗಿದೆ.
ಕಂಗನಾ ರನೌತ್
ಕಂಗನಾ ರನೌತ್
Updated on: 

ಬೆಂಗಳೂರು: ರೈತರ ವಿರುದ್ಧ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶದಂತೆ ದೂರು ದಾಖಲಾಗಿದೆ.

ತುಮಕೂರಿನ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಇತ್ತೀಚೆಗೆ ನಟಿ ವಿರುದ್ಧ ದೂರು ದಾಖಲಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು.

ಅದರಂತೆ ಎ-4, ಫ್ಲ್ಯಾಟ್, ಖಾರ್, ಮುಂಬೈ ಸಿಟಿ, ಮಹಾರಾಷ್ಟ್ರ ಎಂಬ ವಿಳಾಸದಲ್ಲಿರುವ, ವೃತ್ತಿಯಲ್ಲಿ ಕಲಾವಿದರಾಗಿರುವ ಕಂಗನಾ ರನೌತ್ ತಂದೆ ಅಮರ್ ದೀಪ್ ರನೌತ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರೈತರನ್ನು ಭಯೋತ್ಪಾಕದರು ಎಂದು ನಿಂದಿಸಿದ್ದ ಕಂಗನಾ ವಿರುದ್ಧ ಹೈಕೋರ್ಟ್‌ ವಕೀಲ ಎಲ್‌. ರಮೇಶ್‌ ನಾಯಕ್‌ ಅವರು ಸೆ.25ರಂದು ಖಾಸಗಿ ದೂರು ದಾಖಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಬಾಲಿವುಡ್‌ ನಟಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಕ್ಯಾತಸಂದ್ರ ಪೊಲೀಸರಿಗೆ ನಿರ್ದೇಶಿಸಿದೆ. ಅದರಂತೆ ಇಂದು ಐಪಿಸಿ ಸೆಕ್ಷೆನ್ 108, 153, 504, 44 ಅಡಿ ಎಫ್ ಐ ಆರ್ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com