ಬೆಂಗಳೂರು ನಗರದಲ್ಲಿ ಕೊರೋನಾ ಸಕ್ರಿಯ ಕೇಸುಗಳು, ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಸತತ ಏರಿಕೆ

ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 23,982ರಷ್ಟು ಹೆಚ್ಚಾಗಿದೆ.
ಫೀವರ್ ಕ್ಲಿನಿಕ್ ನಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು
ಫೀವರ್ ಕ್ಲಿನಿಕ್ ನಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು

ಬೆಂಗಳೂರು: ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 23,982ರಷ್ಟು ಹೆಚ್ಚಾಗಿದೆ.

ಭಾರತದ ಬೇರೆ 5 ಬೃಹತ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಕ್ರಿಯ ಕೇಸುಗಳು ಅಧಿಕವಾಗಿವೆ. ಸಾಯುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಸೆಪ್ಟೆಂಬರ್ 12ರಿಂದ ಅಕ್ಟೋಬರ್ 10ರ ಮಧ್ಯೆ ಭಾರತದ ಬೃಹತ್ ನಗರದಳಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳು 18 ಸಾವಿರದ 709 ಆಗಿದೆ ಎಂದು ಜೀವನ್ ರಕ್ಷಾ ಎಂಬ ಪ್ರಾಕ್ಸಿಮಾ ಕನ್ಸಲ್ಟೆನ್ಸಿಯ ಅಭಿಯಾನದಿಂದ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಕೊರೋನಾ ಸಕ್ರಿಯ ಕೇಸುಗಳ ಸಂಖ್ಯೆ 23 ಸಾವಿರದ 982ರಷ್ಟು ಹೆಚ್ಚಾಗಿದ್ದರೆ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ 2 ಸಾವಿರದ 932 ಮತ್ತು 2,362ರಷ್ಟು ಜಾಸ್ತಿಯಾಗಿದೆ. ಅದಕ್ಕೆ ವಿರುದ್ಧವಾಗಿ ಅಹಮದಾಬಾದ್ ನಲ್ಲಿ 691ರಷ್ಟು, ಮುಂಬೈಯಲ್ಲಿ 3 ಸಾವಿರದ 824, ದೆಹಲಿಯಲ್ಲಿ 6 ಸಾವಿರದ 052ರಷ್ಟು ಕೊರೋನಾ ಸಕ್ರಿಯ ಕೇಸುಗಳು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಕೊರೋನಾ ಬೆಳವಣಿಗೆ ಪ್ರಮಾಣ ಶೇಕಡಾ 59ರಷ್ಟು ಹೆಚ್ಚಾಗಿದೆ.

ಕೊರೋನಾ ಸೋಂಕಿತರ ಮತ್ತು ಶಂಕಿತರ ಪರೀಕ್ಷೆ ವಿಚಾರದಲ್ಲಿ ದೇಶದ ಪ್ರಮುಖ ಆರು ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಎಂಜಿಆರ್ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದ್ದು ಇದು ನಿಜಕ್ಕೂ ಖುಷಿಯ ಸಂಗತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com