ಒಂದೇ 130 ಮಂದಿಯನ್ನು ಬಲಿಪಡೆದ ಮಹಾಮಾರಿ ಕೊರೋನಾ: ಮರಣ ಸಂಖ್ಯೆ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಕರ್ನಾಟಕ!

ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು, ಮಹಾಮಾರಿ ವೈರಸ್ ಒಂದೇ ದಿನ ಬರೋಬ್ಬರಿ 130 ಮಂದಿಯನ್ನು ಬಲಿಪಡೆದುಕೊಂಡಿದ್ದು, ರಾಜ್ಯದಲ್ಲಿ ಒಟ್ಟಾರೆ ಸಾವನ್ನಪ್ಪಿರುವವರ ಸಂಖ್ಯೆ 7,067ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದ ಸಾವಿನ ಪ್ರಮಾಣದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು 3ನೇ ಸ್ಥಾನ ತಲುಪಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು, ಮಹಾಮಾರಿ ವೈರಸ್ ಒಂದೇ ದಿನ ಬರೋಬ್ಬರಿ 130 ಮಂದಿಯನ್ನು ಬಲಿಪಡೆದುಕೊಂಡಿದ್ದು, ರಾಜ್ಯದಲ್ಲಿ ಒಟ್ಟಾರೆ ಸಾವನ್ನಪ್ಪಿರುವವರ ಸಂಖ್ಯೆ 7,067ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದ ಸಾವಿನ ಪ್ರಮಾಣದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು 3ನೇ ಸ್ಥಾನ ತಲುಪಿದೆ. 

ಮಹಾರಾಷ್ಟ್ರ ರಾಜ್ಯದಲ್ಲಿ ಈ ವರೆಗೂ 28,724 (ಸಾವಿನ ಪ್ರಮಾಣ 2.9) ಮಂದಿ ಬಲಿಯಾಗಿದ್ದರೆ, ತಮಿಳುನಾಡಿನಲ್ಲಿ 8,231 (ಸಾವಿನ ಪ್ರಮಾಣ 1.7) ಮಂದಿ ಸಾವನ್ನಪ್ಪಿದ್ದಾರೆ. ಇನ್ನು ರಾಜ್ಯದಲ್ಲಿ ಈ ವರೆಗೂ 7,067 ಮಂದಿ ಬಲಿಯಾಗಿದ್ದು, ಸಾವಿನ ಪ್ರಮಾಣ ಶೇ.1.61ಕ್ಕೆ ತಲುಪಿದೆ. 

ಇನ್ನು ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 9,464 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕಳೆದ ಕೆಲ ದಿನಗಳಲ್ಲಿ ಕೊರೋನಾ ಪರೀಕ್ಷೆ ಪ್ರಮಾಣ ಕಡಿಮೆಯಾಗಿದ್ದರೂ ಹೊಸ ಸೋಂಕಿತರ ಪ್ರಮಾಣ ಮಾತ್ರ ಪ್ರತೀನಿತ್ಯ 9,000 ದಾಟುತ್ತಿರುವುದು ಆತಂಕ ಉಂಟು ಮಾಡಿದೆ. 

ಸಮಾಧಾನಕರ ವಿಚಾರವೆಂದರೆ, ಶುಕ್ರವಾರ ದಾಖಲೆಯ 12,545 ಮಂದಿ ಕೊರೋನಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾದಿಂದ ಮುಕ್ತರಾದವರ ಸಂಖ್ಯೆ 3.34 ಲಕ್ಷಕ್ಕೆ ಏರಿದೆ. ದಾಖಲೆಯ ಪ್ರಮಾಣದಲ್ಲಿ ಕೊರೋನಾ ಮುಕ್ತರಾದ ಹಿನ್ನೆಲೆಯಲ್ಲಿ ಗುರುವಾರವಷ್ಟೇ ಲಕ್ಷ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 98,326ಕ್ಕೆ ಇಳಿದಿದೆ. ರಾಜ್ಯದಲ್ಲಿ ಕೊರೋನಾ ಗೆದ್ದವರ ಪ್ರಮಾಣ ಶೇ.74.82ರಷ್ಟಿದ್ದು, ದೇಶದಲ್ಲಿ 11ನೇ ಸ್ಥಾನದಲ್ಲಿದೆ. 

ಇನ್ನು 130 ಮಂದಿ ಕೋವಿಡ್'ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 7067ಕ್ಕೇರಿದೆ. ಕೊರೋನಾದಿಂದ ಸತ್ತವರ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲಿಯೇ 3ನೇ ಸ್ಥಾನಕ್ಕೇರಿದ್ದು, ಅದಾಗ್ಯೂ ರಾಜ್ಯದಲ್ಲಿ ಮರಣ ಪ್ರಮಾಣ ಶೇ.1.61ರಷ್ಟಿದ್ದು. ದೇಶದ ಸರಾಸರಿಗಿಂದ (ಶೇ.1.67)ಗಿಂತ ಕಡಿಮೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com