ಡ್ರಗ್ಸ್ ಕೇಸ್: ಪ್ರಮುಖ ಡ್ರಗ್ ಪೆಡ್ಲರ್ ಬಂಧನ

ಮಂಗಳೂರು ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಪೆಡ್ಲರ್'ನನ್ನು ಭಾನುವಾರ ಬಂಧನಕ್ಕೊಳಪಡಿಸಿರುವ ಸಿಸಿಬಿ ತನಿಖಾ ತಂಡ, ಬೆಂಗಳೂರಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಂಗಳೂರು ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಪೆಡ್ಲರ್'ನನ್ನು ಭಾನುವಾರ ಬಂಧನಕ್ಕೊಳಪಡಿಸಿರುವ ಸಿಸಿಬಿ ತನಿಖಾ ತಂಡ, ಬೆಂಗಳೂರಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದೆ. 

ಮುಂಬೈ ಮೂಲದ ಮೊಹಮ್ಮದ್ ಶಾಕೀರ್ (35) ಬಂಧಿತ ಆರೋಪಿಯಾಗಿದ್ದಾರೆ. ಈಗಾಗಲೇ ಮಂಗಳೂರು ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ (30), ಕೊರಿಯಾಗ್ರಾಫರ್ ತರುಣ್ ರಾಜ್, ಅಖಿಲ್ ನೌಶೀಲ್ (28) ಹಾಗೂ ಆಸ್ಕಾ ಎಂಬುವವನ್ನು ಬಂಧಿಸಿದ್ದಾರೆ. 

ಸೂರತ್ಕಲ್ ಮೂಲದ ಮುಂಬೈ ನಿವಾಸಿ ಮಹಮ್ಮದ್ ಶಾಕೀರ್'ನನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಆರೋಪಿಗಳ ವಿಚಾರಣೆ ವೇಳೆ ಸಿಕ್ಕ ಮಾಹಿತಿಯಂತೆ ನೈಜೀರಿಯಾ ಮೂಲದ ಪ್ರಜೆಯೊಬ್ಬನನ್ನು ಬೆಂಗಳೂರಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. 

ಸೂರತ್ಕಲ್ ಸೂರಿಂಜೆ ನಿವಾಸಿ ಮಹಮ್ಮದ್ ಶಾಕೀರ್ ಮುಂಬೈಯಿಂದ ನಿಷೇಧಿತ ಡ್ರಗ್ಸ್ ತಂದು ನಗರದಲ್ಲಿ ಕಿಶೋರ್ ಸೇರಿದಂತೆ ಇತರರಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗೆ ಪೊಲೀಸ್ ಕಸ್ಟಡಿ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com