ಚಿತ್ರದುರ್ಗ: ಕೊರೋನಾ ಗೆದ್ದ 110 ವರ್ಷದ ವೃದ್ಧೆ!

ಕೊರೋನಾ ಮಹಾಮಾರಿಗೆ ಹೆಚ್ಚಾಗಿ ವಯಸ್ಕರು ಹಾಗೂ ವೃದ್ಧರೇ ಹೆಚ್ಚಾಗಿ ಬಲಿಯಾಗುತ್ತಿರುವ ನಡುವಲ್ಲಿ ಅಚ್ಚರಿ ಎಂಬಂತೆ 110 ವರ್ಷದ ವೃದ್ಧೆಯೊಬ್ಬರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. 
ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ವೃದ್ಧೆ
ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ವೃದ್ಧೆ

ಚಿತ್ರದುರ್ಗ: ಕೊರೋನಾ ಮಹಾಮಾರಿಗೆ ಹೆಚ್ಚಾಗಿ ವಯಸ್ಕರು ಹಾಗೂ ವೃದ್ಧರೇ ಹೆಚ್ಚಾಗಿ ಬಲಿಯಾಗುತ್ತಿರುವ ನಡುವಲ್ಲಿ ಅಚ್ಚರಿ ಎಂಬಂತೆ 110 ವರ್ಷದ ವೃದ್ಧೆಯೊಬ್ಬರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. 

ಚಿತ್ರದುರ್ಗ ಜಿಲ್ಲೆಯಲ್ಲಿ ಜು.28 ರಂದು ಕೊರೋನಾ ಸೋಂಕಿತ 110 ವರ್ಷದ ವೃದ್ಧೆಯೊಬ್ಬರು ಚಿಕಿತ್ಸೆಗೆಂದು ಚಿತ್ರದುರ್ಗ ಜಿಲ್ಲ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವೃದ್ಧೆ ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಕೋವಿಡ್ ಆಸ್ಪತ್ರೆಗೆ ದಾಖಲಾದಾಗ ತುಂಬಾ ಭಯವಾಗಿತ್ತು. ಆ್ಯಂಬುಲೆನ್ಸ್ ಮೂಲಕ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾಸ್ಕ್ ಹಾಕಿಕೊಂಡಿದ್ದ ಜನರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆರೋಗ್ಯ ಪರಿಶೀಲಿಸಿ ಪ್ರತೀ ಗಂಟೆಗೊಮ್ಮೆ ನನಗೆ ಔಷಧಿ ನೀಡುತ್ತಿದ್ದರು. ಇದೀಗ ನನ್ನ ಆರೋಗ್ಯ ಉತ್ತಮವಾಗಿದ್ದು, ಮನೆಗೆ ಹಿಂತಿರುಗಿದ್ದು ಬಹಳ ಸಂತೋಷ ತಂದಿದೆ ಎಂದು ಗುಣಮುಖರಾಗಿರುವ ವೃದ್ಧೆ ಸಿದ್ದಮ್ಮ ಅವರು ಹೇಳಿದ್ದಾರೆ. 

ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಗಂಜಿ ಅಜ್ಜಿಗೆ ಇಷ್ಟವಾಗುತ್ತಿರಲಿಲ್ಲ. ಅಜ್ಜಿಗೆ ವಾಸನೆ ಹಾಗೂ ರುಚಿಯ ಶಕ್ತಿ ಕಳೆದುಕೊಂಡಿದ್ದರು. ಅಜ್ಜಿ ರಾಗಿ ಮುದ್ದೆ, ಸಾಂಬಾರ್ ಇಷ್ಟಪಡುತ್ತಿದ್ದರು ಎಂದು ಊಟ ನೀಡುತ್ತಿದ್ದ ವ್ಯಕ್ತಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com