ಆಧಾರ್ ಕಾರ್ಡ್ ಗಾಗಿ ಅಲೆದಾಡಿಸಿದ ಆಸ್ಪತ್ರೆ: ಸೂಕ್ತ ಸಮಯಕ್ಕೆ ಚಿಕಿತ್ಸೆಯಿಲ್ಲದೆ ರೋಗಿ ಸಾವು

ಖಾಸಗಿ ನರ್ಸಿಂಗ್ ಹೋಮ್ ಚಿಕಿತ್ಸೆ ನೀಡಲು ವಿಳಂಬ ಮಾಡಿದ ಕಾರಣ 40 ವರ್ಷದ ಕೊರೋನಾ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಸಗಿ ನರ್ಸಿಂಗ್ ಹೋಮ್ ಚಿಕಿತ್ಸೆ ನೀಡಲು ವಿಳಂಬ ಮಾಡಿದ ಕಾರಣ 40 ವರ್ಷದ ಕೊರೋನಾ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು,  ಅದಾದ ನಂತರ ಆತ ಹೋಮ್ ಕ್ವಾರಂಟೈನ್ ನಲ್ಲಿದ್ದ,   ಆದರೆ ಆತನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಆತನ ಕುಟುಂಬಸ್ಥರು ಕೂಡಲೇ ಆತನನ್ನು ಗಿರಿ ನಗರದಲ್ಲಿರುವ ಮದು ನರ್ಸಿಂಗ್ ಹೋಮ ಗೆ ಆ್ಯಂಬುಲೆನ್ಸ್
ನಲ್ಲಿ ಕರೆದೊಯ್ದರು.  ಆದರೆ ಈ ವೇಳೆ ಆಸ್ಪತ್ರೆ ಸಿಬ್ಬಂದಿ ಆಧಾರ್ ಕಾರ್ಡ್ ತರುವಂತೆ ಕೇಳಿದ್ದಾರೆ, ಜೊತೆಗೆ ಬೆಡ್ ಇಲ್ಲ ಮತ್ತು ಐಸಿಯು ಕೂಡ ಇಲ್ಲ ಎಂದು ಹೇಳಿ ಚಿಕಿತ್ಸೆ ನಿರಾಕರಿಸಿದ್ದಾರೆ. ನಂತರ ಆರ್ ಆರ್ ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. 

ಆದರೆ ಆ್ಯಂಬುಲೆನ್ಸ್ ಚಾಲಕ ಆರ್ ಆರ್ ನಗರದ ಆಸ್ಪತ್ರೆಗೆ ಕರೆದೊಯ್ಯುವ ಬದಲು ಹೊಸೂರು ರಸ್ತೆಯಲ್ಲಿರುವ  ಖಾಸಗಿ ಆಸ್ಪತ್ರೆಗೆ ಕರೆದಯ್ಯಲು ನಿರ್ಧರಿಸಿದ್ದಾನೆ, ಗಿರಿನಗರದಿಂದನಹೊಸೂರಿಗೆ 17 ಕೀಮೀ ದೂರವಾಗುತ್ತದೆ. ಈ ವೇಳೆಗೆ ರೋಗಿ ಮತ್ತಷ್ಟು ನಿತ್ರಾಣವಾಗಿದ್ದರು. ಅಂತಿಮವಾಗಿ ಆಸ್ಪತ್ರೆಯೊಳಗೆ ಕರೆದೊಯ್ಯುಲಾಯಿತು,  ಅಲ್ಲಿನ ವೈದ್ಯರು ಕೂಡಲೇ ಆತನಿಗೆ ಚಿಕಿತ್ಸೆ ನೀಡುವ ಬದಲು 1 ಗಂಟೆ ಕಾಲ ಸ್ಟ್ರೆಚರ್ ಮೇಲೆ ಬಿಟ್ಟರು, ನಂತರ ಬಂದು ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ತಿಳಿಸಿದರು.

ಮೃತರ ಕುಟುಂಬವು ಆಸ್ಪತ್ರೆಯ ಅಧಿಕಾರಿಗಳನ್ನು ಥಳಿಸಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿದೆ, ಹೊಸೂರು ರಸ್ತೆಯಲ್ಲಿರುವ ಆಂಬುಲೆನ್ಸ್ ಚಾಲಕ ಮತ್ತು ಖಾಸಗಿ ಆಸ್ಪತ್ರೆಯ ನಡುವೆ ಸಂಬಂಧವಿದೆ ಎಂದು ಮೃತ ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com