ಬೆಂಗಳೂರು: ಟೇರೆಸ್‌ನಿಂದ ಬಿದ್ದು ಕೆಎಸ್‍ಆರ್‌ಪಿ  ಮುಖ್ಯಪೇದೆ ಸಾವು

 ವಸತಿಗೃಹದ ಮೂರನೇ ಮಹಡಿಯ ಟೇರೆಸ್‌ನಿಂದ ಆಯ ತಪ್ಪಿ ಬಿದ್ದು ರಾಜ್ಯ ಮೀಸಲು ಪಡೆಯ (ಕೆಎಸ್‍ಆರ್‌ಪಿ) ಹೆಡ್ ಕಾನ್‌ಸ್ಟೆಬಲ್‌ ಮೃತಪಟ್ಟ ಘಟನೆ  ನಡೆದಿದೆ.

Published: 13th February 2020 02:15 PM  |   Last Updated: 13th February 2020 02:15 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ವಸತಿಗೃಹದ ಮೂರನೇ ಮಹಡಿಯ ಟೇರೆಸ್‌ನಿಂದ ಆಯ ತಪ್ಪಿ ಬಿದ್ದು ರಾಜ್ಯ ಮೀಸಲು ಪಡೆಯ (ಕೆಎಸ್‍ಆರ್‌ಪಿ) ಹೆಡ್ ಕಾನ್‌ಸ್ಟೆಬಲ್‌ ಮೃತಪಟ್ಟ ಘಟನೆ  ನಡೆದಿದೆ.

9ನೇ ಬೆಟಾಲಿಯನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ.ಎನ್. ಮುದ್ರೆ (59) ಮೃತಪಟ್ಟವರು.

ಕೋರಮಂಗಲದಲ್ಲಿರುವ ವಸತಿಗೃಹದಲ್ಲಿ ನೆಲೆಸಿದ್ದ ಮುದ್ರೆ ಅವರು, ಟ್ಯಾಂಕ್‍ನಲ್ಲಿ ನೀರು ಇದೆಯೇ ಎಂದು ಪರಿಶೀಲಿಸಲು ಬುಧವಾರ ಬೆಳಿಗ್ಗೆ 6 ಗಂಟೆಗೆ ಟೇರೆಸ್‍ಗೆ ತೆರಳಿದ್ದರು. ಈ ವೇಳೆ  ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮುದ್ರೆ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ ಎಎಸ್ ಐ  ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದ್ದಾರೆ, ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು, 

ಶವನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp