ಅತ್ಯಾಚಾರದ ವಿಡಿಯೋ ಮಾಡಿ ಮತಾಂತರಕ್ಕೆ ಯತ್ನ: ಬೆಂಗಳೂರಿನಲ್ಲಿ ಓರ್ವನ ಬಂಧನ

ಕೇರಳದ ಕಾಸರಗೋಡು ಜಿಲ್ಲೆಯ ಮೊರ್ಗಾಲ್‌ ಪುತ್ತೂರು ಗ್ರಾಮದ ಹಿಂದೂ ಯುವತಿ ಹಾಗೂ ಕುಟುಂಬವನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವಂತೆ ಒತ್ತಾಯ ಮಾಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Published: 07th January 2020 09:03 AM  |   Last Updated: 07th January 2020 12:08 PM   |  A+A-


Arrested Rapist

ಬಂಧಿತ ಆರೋಪಿ

Posted By : Shilpa D
Source : Online Desk

ಬೆಂಗಳೂರು:  ಕೇರಳದ ಕಾಸರಗೋಡು ಜಿಲ್ಲೆಯ ಮೊರ್ಗಾಲ್‌ ಪುತ್ತೂರು ಗ್ರಾಮದ ಹಿಂದೂ ಯುವತಿ ಹಾಗೂ ಕುಟುಂಬವನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವಂತೆ ಒತ್ತಾಯ ಮಾಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ರಿಷಬ್, ಅನ್ಸರ್  ಬಂಧಿತ ಆರೋಪಿ.  ರಿಷಬ್ ಯುವತಿಯನ್ನು ಬೆಂಗಳೂರಿಗೆ ಕರೆತಂದು ಸ್ನೇಹದ ಸೋಗಿನಲ್ಲಿ ಮತ್ತು ಬರಿಸುವ ಪಾನೀಯವನ್ನು ಯುವತಿಗೆ ಕುಡಿಸಿದ್ದ. ನಂತರ ಈಕೆಯ ಮೇಲೆ ಅತ್ಯಾಚಾರ ನಡೆಸಿದ್ದ.  ಅಲ್ಲದೆ, ಅತ್ಯಾಚಾರ ನಡೆಸಿದ್ದನ್ನು ಚಿತ್ರೀಕರಣ ಮಾಡಲಾಗಿತ್ತು. 

ಇದೇ ವಿಡಿಯೋ ಇಟ್ಟುಕೊಂಡು ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಅತ್ಯಾಚಾರಿ ಒತ್ತಡ ಹೇರುತ್ತಿದ್ದ. ಒಂದೊಮ್ಮೆ ಮತಾಂತರಗೊಳ್ಳದಿದ್ದರೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದ.

ರಿಷಬ್​ ಬೆಂಗಳೂರಿಗೆ ಬಂದಾಗ ಆತನಿಗೆ ಉಳಿಯಲು ಅನ್ಸರ್ ​ ತನ್ನ ಮನೆಯಲ್ಲೇ ಜಾಗ ಕೊಟ್ಟಿದ್ದ. ಮೂರು ದಿನಗಳಕಾಲ ರಿಷಬ್​ ಯುವತಿಯನ್ನು ಇಲ್ಲಿಯೇ ಇಟ್ಟುಕೊಂಡಿದ್ದ. ಈ ವೇಳೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನ್ಸರ್​ನನ್ನು ಬಂಧಿಸಲಾಗಿದ್ದು, ರಿಷಬ್ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಈ ಬಗ್ಗೆ ಕಾಸರಗೋಡಿನಲ್ಲಿ ದೂರು ನೀಡಿದ್ದರೂ ಕೇರಳ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಡ ಹೇರಿದ ಯುವಕರು ಬೆಂಗಳೂರಿನಲ್ಲಿ ನೆಲೆಸಿರುವ ಕಾರಣ ಸಂತ್ರಸ್ತ ಯುವತಿ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದರು. 

ಈ ಸಂಬಂಧ ಸಂತ್ರಸ್ತೆ ಜೊತೆ ತೆರಳಿ ಪೊಲೀಸ್ ಕಮಿಷನರ್​ಗೆ ಶೋಭಾ ಕರಂದ್ಲಾಜೆ ದೂರು ನೀಡಿದ್ದರು. ದೂರು ಆಧಿರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp