ಭಾರತ್ ಬಂದ್: ಎಚ್ಚರಿಕೆಯ ನಡುವೆಯೂ ಪ್ರತಿಭಟನೆಗೆ ಮುಂದಾದ ಕಾರ್ಮಿಕರು

ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೇ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪೊಲೀಸರ ಎಚ್ಚರಿಕೆಯ ನಡುವೆಯೂ ಕಾರ್ಮಿಕ ಸಂಘಟನೆಗಳು ಕೈಗಾರಿಕಾ ಪ್ರದೇಶದಲ್ಲಿ ರ್ಯಾಲಿ ನಡೆಸಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ. 
ಭಾರತ್ ಬಂದ್: ಎಚ್ಚರಿಕೆಯ ನಡುವೆಯೂ ಪ್ರತಿಭಟನೆಗೆ ಮುಂದಾದ ಕಾರ್ಮಿಕರು
ಭಾರತ್ ಬಂದ್: ಎಚ್ಚರಿಕೆಯ ನಡುವೆಯೂ ಪ್ರತಿಭಟನೆಗೆ ಮುಂದಾದ ಕಾರ್ಮಿಕರು

ಬೆಂಗಳೂರು: ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೇ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪೊಲೀಸರ ಎಚ್ಚರಿಕೆಯ ನಡುವೆಯೂ ಕಾರ್ಮಿಕ ಸಂಘಟನೆಗಳು ಕೈಗಾರಿಕಾ ಪ್ರದೇಶದಲ್ಲಿ ರ್ಯಾಲಿ ನಡೆಸಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ. 

ಪೀಣ್ಯಾದ ಕೈಗಾರಿಕಾ ಪ್ರದೇಶದಿಂದ ಟೌನ್ ಹಾಲ್ ವರೆಗೂ ರ್ಯಾಲಿ ನಡೆಯಲಿದ್ದು, 160 ಸಂಘಟನೆಗಳು ರ್ಯಾಲಿಯಲ್ಲಿ ಭಾಗಿಯಾಗಲಿವೆ ಎಂದು ತಿಳಿದುಬಂದಿದೆ. 

ಇನ್ನು ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಟನೆ ನಡೆಯಲಿದ್ದು, 20,000-30,000ದವರೆಗೂ ಜನರು ಸೇರಲಿದ್ದಾರೆಂದು ಹೇಳಲಾಗುತ್ತಿದೆ. ಮುಷ್ಕರಕ್ಕೆ ಬ್ಯಾಂಕಿಂಗ್ ವಲಯ ಬೆಂಬಲ ವ್ಯಕ್ತಪಡಿಸಿದ್ದು, ಎಟಿಎಂ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. 

ಶೇ.70ರಷ್ಟು ಸಾರಿಗೆ ವ್ಯವಸ್ಥೆಗಳು ಸಾಗಿದ್ದು, ಜನಜೀವನ ಎಂದಿನಂತೆ ಸಾಮಾನ್ಯವಾಗಿರುವುದು ಕಂಡು ಬಂದಿದೆ. ಿನ್ನು ಕೆಲಸಕ್ಕೆ ಹಾಜರಾಗದ ಕಾರ್ಮಿಕರ ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂಬ ಸೂಚನೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಐಟಿಯೂ ಸದಸ್ಯ ಪ್ರತಾಪ್ ಸಿಂಹ ಅವರು, ಇಂತಹ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದಿದ್ದಾರೆ. 

ಎಐಟಿಯುಸಿ ಮುಖ್ಯ ಕಾರ್ಯದರ್ಶಿ ಡಿ.ಎ.ವಿಜಯ್ ಭಾಸ್ಕರ್ ಮಾತನಾಡಿ, ಕೆಎಸ್ಆರ್'ಟಿಸಿ ಸಿಬ್ಬಂದಿ ಹಾಗೂ ಇತರೆ ಕಾರ್ಮಿಕ ಸಂಘಟನೆಗಳು ಕೆಎಸ್ಆರ್'ಟಿಸಿ ಪ್ರಧಾನ ಕಚೇರಿ ಬಳಿ ಬೆಳಿಗ್ಗೆ 11 ಗಂಟೆಯಿಂದ ಧರಣಿ ನಡೆಸಲಿದೆ. ಸೇವೆಯಗಳಲ್ಲಿ ಯಾವುದೇ ವ್ಯತ್ಯಯಗಳಿರುವುದಿಲ್ಲ. ಕಚೇರಿ ಎದುರು ಧರಣಿಯನ್ನಷ್ಟೇ ನಡೆಸುತ್ತೇವೆಂದು ತಿಳಿಸಿದ್ದಾರೆ. 

ಕೆಎಸ್ಆರ್'ಟಿಸಿ ನಿರ್ವಾಹಕ ನಿರ್ದೇಶಕ ಶಿವಯೋಗಿ ಕಲಶದ್ ಮಾತನಾಡಿ, ನಿಗದಿಯಂತೆಯೇ ಬಸ್ ಗಳು ಸೇವೆ ಸಲ್ಲಿಸಲಿವೆ. ಇದರ ಬಗ್ಗೆ ನಮಗೆ ವಿಶ್ವಾಸವಿದೆ. ಬಸ್ ಗಳಿಗೆ ರಕ್ಷಣೆ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಅನಧಿಕೃತವಾಗಿ ರಜೆ ಪಡೆದ ಸಿಬ್ಬಂದಿಗಳ ವಿರುದ್ಧ ಕಾನೂನು ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com