ಇಂದು ಕರ್ನಾಟಕ ಸಂಡೇ ಲಾಕ್'ಡೌನ್: ಅಗತ್ಯ ವಸ್ತುಗಳು ಬಿಟ್ಟು ನಾಳೆ ಬೆಳಿಗ್ಗೆ 5 ರವರೆಗೆ ಎಲ್ಲಾ ವಹಿವಾಟುಗಳು ಸ್ಥಗಿತ

ರಾಜ್ಯದಲ್ಲಿ ನಿಯಂತ್ರಣ ತಪ್ಪುತ್ತಿರುವ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಮಟ್ಟಹಾಕಲು ಘೋಷಣೆ ಮಾಡಲಾಗಿರುವ ಸಂಡೇ ಲಾಕ್ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು, ಭಾನುವಾರ ರಾಜ್ಯದಾದ್ಯಂತ ಬಹುತೇಕ ಎಲ್ಲಾ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. 
ಕರ್ನಾಟಕ ಸಂಡೇ ಲಾಕ್'ಡೌನ್
ಕರ್ನಾಟಕ ಸಂಡೇ ಲಾಕ್'ಡೌನ್

ಬೆಂಗಳೂರು: ರಾಜ್ಯದಲ್ಲಿ ನಿಯಂತ್ರಣ ತಪ್ಪುತ್ತಿರುವ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಮಟ್ಟಹಾಕಲು ಘೋಷಣೆ ಮಾಡಲಾಗಿರುವ ಸಂಡೇ ಲಾಕ್ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು, ಭಾನುವಾರ ರಾಜ್ಯದಾದ್ಯಂತ ಬಹುತೇಕ ಎಲ್ಲಾ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. 

ಸೋಮವಾರ ಬೆಳಿಗ್ಗೆ 5 ಗಂಟೆಗಳ ವರೆಗೆ ಸತತ 33 ಗಂಟಗಳ ಕಾಲ ಈ ಕಠಿಣ ಲಾಕ್'ಡೌನ್ ಜಾರಿಯಲ್ಲಿರಲಿದೆ. ಎರಡನೇ ಹಂತದ ಅನ್'ಲಾಕ್ ಅವಧಿಯಲ್ಲಿನ ಪ್ರತಿ ಭಾನುವಾರ ಲಾಕ್'ಡೌನ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. 

ಇದರಂತೆ ಭಾನುವಾರ ಚಂದ್ರಗ್ರಹಣವೂ ಸೇರಿ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿತ್ತು. ಇದೀಗ ಜು.11ರಂದು ಶನಿವಾರ ರಾತ್ರಿ 8ಗಂಟೆಯಿಂದಲೇ ಪ್ರಾರಂಭವಾಗಿರುವ ಲಾಕ್'ಡೌನ್ ನಿಂದಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳಲಿವೆ. ತುರ್ತುಸೇವೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಇನ್ನುಳಿದ ಯಾವುದೇ ಚಟುವಟಿಕೆಗಳು ಸೋಮವಾರ ಬೆಳಗ್ಗೆ 5ರವರೆಗೆ ಇರುವುದಿಲ್ಲ. ಇದೇ ಮಾದರಿಯ ಭಾನುವಾರದ ಲಾಕ್'ಡೌನ್ ತಿಂಗಳಾಂತ್ಯದವರೆಗೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com