ಕೊರೋನಾ ಲಾಕ್'ಡೌನ್: ಬೆಂಗಳೂರು ಸ್ತಬ್ಧ, ಜನರ ಚಟುವಟಿಕೆಗಳಿಲ್ಲದೆ ರಸ್ತೆಗಳು ಖಾಲಿ ಖಾಲಿ!

ಅಂಕೆಗೆ ಸಿಗದೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ಹತೋಟಿಗೆ ತರುವ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ಲಾಕ್'ಡೌನ್'ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬುಧವಾರ ನಗರದ ಬಹುತೇಕ ರಸ್ತೆಗಳು ಜನರ ಚಟುವಟಿಕೆಗಳಿಲ್ಲದೆ ಖಾಲಿಯಾಗಿರುವುದು ಕಂಡು ಬಂದಿತ್ತು. 
ಲಾಕ್ಡೌನ್ ಹಿನ್ನೆಲೆಯಲ್ಲಿ ಹೆಬ್ಬಾಳ ರಸ್ತೆಯಲ್ಲಿ ಕಂಡು ಬಂದ ದೃಶ್ಯ
ಲಾಕ್ಡೌನ್ ಹಿನ್ನೆಲೆಯಲ್ಲಿ ಹೆಬ್ಬಾಳ ರಸ್ತೆಯಲ್ಲಿ ಕಂಡು ಬಂದ ದೃಶ್ಯ

ಬೆಂಗಳೂರು: ಅಂಕೆಗೆ ಸಿಗದೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಸೋಂಕು ಹತೋಟಿಗೆ ತರುವ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ಲಾಕ್'ಡೌನ್'ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬುಧವಾರ ನಗರದ ಬಹುತೇಕ ರಸ್ತೆಗಳು ಜನರ ಚಟುವಟಿಕೆಗಳಿಲ್ಲದೆ ಖಾಲಿಯಾಗಿರುವುದು ಕಂಡು ಬಂದಿತ್ತು. 

ಲಾಕ್'ಡೌನ್ ಪರಿಣಾಮಕಾರಿಯಾಗಿ ಜಾರಿಗೆ ತರುವ ಸಲುವಾಗಿ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರು. ಆಗತ್ಯ ವಸ್ತುಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಬೆಳಿಗ್ಗೆ 5ರಿಂದ 12 ಗಂಟೆಗಳ ವರೆಗೆ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಲಾಕ್'ಡೌನ್ ಬಗ್ಗೆ ಈ ಮೊದಲೇ ಮಾಹಿತಿಯಿದ್ದ ಕಾರಣ ಹಿಂದಿನ ದಿನವೇ ಜನರು ಅಗತ್ಯವಸ್ತುಗಳನ್ನು ಖರೀದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾಗಿ ಜನರು ಅಷ್ಟಾದಿ ರಸ್ತೆಗಿಳಿದಿರಲಿಲ್ಲ. 

ಮಧ್ಯಾಹ್ನ 12 ಗಂಟೆ ಬಳಿಕ ಬೆಂಗಳೂರಿನ ಬಹುತೇಕ ರಸ್ತೆಗಳು ಸ್ತಬ್ಧಗೊಂಡಿದ್ದು, ಕೇವಲ ಆಸ್ಪತ್ರೆಗಳು ಹಾಗೂ ಔಷಧಿ ಮಳಿಗೆಗಳಷ್ಟೇ ಎಂದಿನಿಂದ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿತ್ತು. ಈ ನಡುವೆ ನಗರದಲ್ಲಿ ಅಲ್ಪಮಟ್ಟದ ಮಳೆ ಕೂಡ ಆಗಿದ್ದು, ಜನರು ಹೊರಗೆ ಬರುವುದನ್ನು ತಡೆಹಿಡಿದಿತ್ತು. 

ಹೋಟೆಲ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು ಆದರೆ, ಕೇವಲ ಪಾರ್ಸೆಲ್ ಗಳಿಗಷ್ಟೇ ಅವಕಾಶ ನೀಡಲಾಗಿತ್ತು. ಈ ನಡುವೆ ಅನಗತ್ಯವಾಗಿ ಓಡಾಡುತ್ತಿದ್ದ ಕೆಲ ವಾಹನ ಸವಾರರನ್ನು ತಡೆದಿದ್ದ ಪೊಲೀಸರು ವಾಹನವನ್ನು ಜಪ್ತಿ ಮಾಡಿದರು. ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com