ಚಿಕಿತ್ಸೆ ನಿರಾಕರಿಸಿದ ಬೆಂಗಳೂರಿನ 7 ಆಸ್ಪತ್ರೆಗಳು: ಗರ್ಭಿಣಿ ಪತ್ನಿ ಕಳೆದುಕೊಂಡು ಪತಿ ಅಸಹಾಯಕ!

ಕಳೆದ ವಾರ ಬೆಂಗಳೂರಿನಿಂದ ಛತ್ತೀಸ್ ಗಡಕ್ಕೆ ತೆರಳಿದ ರಾಜಕುಮಾರ್ ಪುರಿ ಅವರ ಕರುಣಾಜನಕ ಕಥೆಯಿದು. ಉತ್ತಮ ಜೀವನ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪುರಿ ತನ್ನ ಪತ್ನಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳೊಂದಿಗೆ ಬಿಸ್ಲಾಪುರಕ್ಕೆ ತೆರಳಿದ್ದಾರೆ.
ಗಾಯತ್ರಿ ಮತ್ತು ರಾಜ್ ಕುಮಾರ್ ಪುರಿ
ಗಾಯತ್ರಿ ಮತ್ತು ರಾಜ್ ಕುಮಾರ್ ಪುರಿ

ಬೆಂಗಳೂರು: ನಗರದ 7 ಆಸ್ಪತ್ರೆಗಳು ಗರ್ಭಿಣಿಯೊಬ್ಬರಿಗೆ ಚಿಕಿತ್ಸೆ ನಿರಾಕರಿಸಿದ ಕಾರಣ ಆಕೆ ಸಾವನ್ನಪ್ಪಿದ ಮನಕಲಕುವ ಘಟನೆ ನಡೆದಿದೆ.

ಕಳೆದ ವಾರ  ಬೆಂಗಳೂರಿನಿಂದ ಛತ್ತೀಸ್ ಗಡಕ್ಕೆ ತೆರಳಿದ ರಾಜಕುಮಾರ್ ಪುರಿ ಅವರ ಕರುಣಾಜನಕ ಕಥೆಯಿದು.  ಉತ್ತಮ ಜೀವನ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪುರಿ ತನ್ನ ಪತ್ನಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳೊಂದಿಗೆ ಬಿಸ್ಲಾಪುರಕ್ಕೆ ತೆರಳಿದ್ದಾರೆ.

ಏಪ್ರಿಲ್ 9ರಂದು ಪುರಿ ಪತ್ನಿ ಗಾಯತ್ರಿಗೆ ತೀವ್ರತರವಾದ ಮೈ ಕೈನೋವು ಕಾಣಿಸಿಕೊಂಡಿದೆ, ಏಪ್ರಿಲ್ 9 ಮತ್ತು ಏಪ್ರಿಲ್ 10ರ ಬೆಳಗಿನ ಜಾವದವರೆಗೂ ಇಡೀ ನಗರವನ್ನು ಸುತ್ತಾಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಯಾವ ಆಸ್ಪತ್ರೆಯಲ್ಲಿಯೂ ದಾಖಲಿಸಿಕೊಳ್ಳಲಿಲ್ಲ, ವಿವಿಧ ಕಾರಣ ನೀಡಿ ವಾಪಸ್ ಕಳುಹಿಸಿದರು. ಏಪ್ರಿಲ್ 10 ರಂದು
ಆಕೆ ಸಾವನ್ನಪ್ಪಿದ್ದಳು.

ಈ ಸಂಬಂಧ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಯಾವೊಬ್ಬ ವೈದ್ಯರು ಮತ್ತು ಯಾವುದೇ ಆಸ್ಪತ್ರೆ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ,  ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳ ಬಗ್ಗೆ ಮಾಹಿತಿ ಪಡೆದು ಶಿಸ್ತು ಕ್ರಮ ಜರುಗಿಸುವದಾಗಿ ಹೇಳಿದ್ದಾರೆ.

ಇನ್ನೂ ಈ ಸಂಬಂದ ದೂರವಾಣಿ ಮೂಲಕ ಮಾತನಾಡಿದ ರಾಜ್ ಕುಮಾರ್ ಪುರಿ, ನನ್ನ ಪತ್ನಿಗೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿತ್ತು, ಕೊರೋನಾ ಪ್ರಮಾಣ ಹೆಚ್ಚಾಗಿರುವ ಕಾರಣ ಯಾವುದೇ ಹೊಸ ರೋಗಿಯನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆಯೊಂದು ತಿಳಿಸಿತು. 

ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಎಂದು ಹೇಳಿದರು. ಮತ್ತೊಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ನೋವಿನಿಂದ ನರಳುತ್ತಿದ್ದ ಆಕೆಯ ಮುಂದೆ ನಾವು ಅಸಹಾಯಕರಾಗಿ ನಿಂತಿದ್ದೆವು ಎಂದು ಕಣ್ಣೀರು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com