ಸಬ್ಸಿಡಿ ಕೊಡದ ಸರ್ಕಾರ: ಇಂದಿರಾ ಕ್ಯಾಂಟೀನ್ ಆಹಾರ ದರ ಏರಿಕೆ

ಬಡ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುತ್ತಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿನ ಆಹಾರದ ದರವನ್ನು ಏರಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಡ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುತ್ತಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿನ ಆಹಾರದ ದರವನ್ನು ಏರಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ. 

ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸರ್ಕಾರ ನಿಲ್ಲಿಸಿರುವುದರಿಂದ ಆಗುತ್ತಿರುವ ಹೊರೆ ಇಳಿಸಲು ಆಹಾರದ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. 

ಇದರಂತೆ ಪ್ರಸ್ತುತ ರೂ,5 ಇರುವ ಬೆಳಗಿನ ತಿಂಡಿ ಬೆಲೆಯನ್ನು ರೂ.10ಕ್ಕೆ ಹಾಗೂ ರೂ.10 ಇರುವ ಮಧ್ಯಾಹ್ನ ಮತ್ತು ರಾತ್ರಿ ಊಟದ ಬೆಲೆಯನ್ನು ರೂ.15ಕ್ಕೆ ಏರಿಕೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. 

ಈ ಸಂಬಂಧ ಮಾತನಾಡಿರುವ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಅವರು, ಇಂದಿರಾ ಕ್ಯಾಂಟೀನ್ ಯೋಜನೆಗೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ಅನುದಾನ ಈಗ ಸಿಗುತ್ತಿಲ್ಲ. ಇದರಿಂದ ಯೋಜನೆಯ ಪೂರ್ಣ ನಿರ್ವಹಣ ಬಿಬಿಎಂಬಿ ಮೇಲೆ ಬೀಳುತ್ತಿದ್ದು, ಆರ್ಥಿಕವಾಗಿ ಹೊರೆಯಾಗುತ್ತಿದೆ. ಇದನ್ನು ತಗ್ಗಿಸಲು ಕೊಂಚೆ ಬೆಲೆ ಏರಿಸಲು ಚಿಂತನೆ ನಡೆಸಲಾಗಿದೆ. ತಿಂಡಿ ಮತ್ತು ಊಟದ ಬೆಲೆಯನ್ನು ತಲಾ ರೂ.5 ಹೆಚ್ಚಿಸುವ ಚಿಂತನೆ ಇದೆ. ಇದರಿಂದ ಸಾರ್ವಜಿಕರಿಗೆ ಹೆಚ್ಚಿನ ಹೊರೆಯೇನೂ ಆಗುವುದಿಲ್ಲ ಎಂಬುದು ಪಾಲಿಕೆಯ ಭಾವನೆ ಎಂದು ತಿಳಿಸಿದ್ದಾರೆ. 

ಸರ್ಕಾರ ಸಬ್ಸಿಡಿ ಕೊಡದಿದ್ದರೆ ಪಾಲಿಕೆಯಿಂದ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸಾಧ್ಯವಾಗುವುದಿಲ್ಲ. ಮುಚ್ಚಲಾಗುವುದು ಎಂಬ ಹಂತಕ್ಕೆ ಬಂದಿದ್ದ ಬಿಬಿಎಂಪಿ, ಈಗ ಸರ್ಕಾರದ ಸಬ್ಸಿಡಿ ಸಿಗದೆ ಆಗುತ್ತಿರುವ ಹೊರೆಯನ್್ನು ಜನರ ಮೇಳೆ ಎಳೆಯಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com