ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್: ರೂಮ್'ಮೇಟ್'ನಲ್ಲಿ ದೃಢಪಟ್ಟಿಲ್ಲ ಸೋಂಕು

ಕೊರೋನಾ ಸೋಂಕು ದೃಢಪಟ್ಟಿರುವ ತೆಲಂಗಾಣದ ಟೆಕ್ಕಿಯೊಬ್ಬ ಬೆಂಗಳೂರಿಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದ 65 ಮಂದಿಯನ್ನು ಪ್ರತ್ಯೇಕವಾಗಿಟ್ಟು ಅವರೆಲ್ಲರ ಆರೋಗ್ಯದ ಮೇಲೆ ನಿಗಾವಹಿಸಿದೆ. ಅಲ್ಲದೆ. ವ್ಯಕ್ತಿ ವಾಸ್ತವ್ಯ ಹೂಡಿದ್ದ ಅಪಾರ್ಟ್ ಮೆಂಟ್'ನ 93 ಫ್ಲ್ಯಾಟ್ ನಲ್ಲಿ...
ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್: ರೂಮ್'ಮೇಟ್'ನಲ್ಲಿ ದೃಢಪಟ್ಟಿಲ್ಲ ಸೋಂಕು
ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್: ರೂಮ್'ಮೇಟ್'ನಲ್ಲಿ ದೃಢಪಟ್ಟಿಲ್ಲ ಸೋಂಕು

ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟಿರುವ ತೆಲಂಗಾಣದ ಟೆಕ್ಕಿಯೊಬ್ಬ ಬೆಂಗಳೂರಿಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದ 65 ಮಂದಿಯನ್ನು ಪ್ರತ್ಯೇಕವಾಗಿಟ್ಟು ಅವರೆಲ್ಲರ ಆರೋಗ್ಯದ ಮೇಲೆ ನಿಗಾವಹಿಸಿದೆ. ಅಲ್ಲದೆ. ವ್ಯಕ್ತಿ ವಾಸ್ತವ್ಯ ಹೂಡಿದ್ದ ಅಪಾರ್ಟ್ ಮೆಂಟ್'ನ 93 ಫ್ಲ್ಯಾಟ್ ನಲ್ಲಿ ಜೊತೆಗೆ ವಾಸಿಸುತ್ತಿದ್ದ ಟೆಕ್ಕಿಯ ಸ್ನೇಹಿತನನ್ನು ತಪಾಸಣೆ ನಡೆಸಲಾಗಿದ್ದು, ಸೋಂಕು ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ. 

ಸೋಂಕು ದೃಢಪಡದೇ ಇದ್ದರೂ ಟೆಕ್ಕಿಯ ಸ್ನೇಹಿತನನ್ನು ಅದೇ ಕೊಠಡಿಯಲ್ಲಿ ತಂಗುವಂತೆ ಮಾಡಿ ನಿಗಾವಹಿಸಲಾಗಿದೆ. ಈ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡು ಬಂದ ಕಾರಣ ಮಂಗಳವಾರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದು, ಪ್ರಾಥಮಿಕ ಪರಿಶೀಲನೆಯಲ್ಲಿ ಸೋಂಕು ಇಲ್ಲದಿರುವುದು ದೃಫಟ್ಟಿದೆ. 

ಹೆಚ್ಚುವರಿ ಪರೀಕ್ಷೆಗೆ ವ್ಯಕ್ತಿಯ ರಕ್ತದ ಮಾದರಿಯನ್ನು ಕಳುಹಿಸಲಾಗಿದೆ. ಪ್ರಾಥಮಿತ ತನಿಖೆಯಲ್ಲಿ ಸೋಂಕು ದೃಢಪಡದಿದ್ದರೂ ಅವರನ್ನು ಕೊಠಡಿಯಲ್ಲಿಯೇ ಪ್ರತ್ಯೇಕವಾಗಿಟ್ಟು ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ. ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಯೂ 25 ಉದ್ಯೋಗಿಗಳು ಹಾಗೂ ಹೈದರಾಬಾದ್'ಗೆ ಪ್ರಯಾಣಿಸಿದ್ದ ಬಸ್ಸಿನಲ್ಲಿದ್ದ ಕರ್ನಾಟಕದ 23 ಮಂದಿ ಮೇಲೆ ನಿಗಾ ಇಡಲಾಗಿದೆ. 

ದುಬೈನಿಂದ ಬೆಂಗಳೂರಿಗೆ ಆಗಮಿಸುವಾಗ ವಿಮಾನದಲ್ಲಿ ಸಹ ಪ್ರಯಾಣಿಕರಾಗಿದ್ದ 15 ಮಂದಿ ಮತ್ತು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಟೆಕಿಯನ್ನು ಕರೆತಂದಿದ್ದ ಕ್ಯಾಬ್ ಚಾಲಕ ಸೇರಿ ಒಟ್ಟು 65 ಮಂದಿಯನ್ನು ಪ್ರತ್ಯೇಕವಾಗಿಟ್ಟು ನಿಗವಾಹಿಸಲಾಗುತ್ತಿದೆ. ಟೆಕಿ ಪ್ರಯಾಣಿಸಿದ ಬಸ್ಸಿನಲ್ಲಿ ತೆಲಂಗಾಣದವರಾದ ಇನ್ನೂ 17 ಮಂದಿ ಇದ್ದು, ಅವರ ವಿಳಾಸ ಆಧರಿಸಿ ತೆಲಂಗಾಣ ಸರ್ಕಾರವೇ ಅವರ ಮೇಲೆ ನಿಗಾವಹಿಸಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com