ಕೊರೋನಾ ಸೋಂಕು ತಪಾಸಣೆಗೆ 31 ಫೀವರ್ ಕ್ಲಿನಿಕ್ ಪುನಾರಂಭ, ಇಲ್ಲಿದೆ ಕ್ಲಿನಿಕ್ ಗಳ ಸಂಪೂರ್ಣ ವಿವರ

ಕೊರೋನಾ ಸೋಂಕು ಶಂಕಿತರಿಗೆ ತುರ್ತು ತಪಾಸಣೆ ನಡೆಸುವ‘ಫೀವರ್ ಕ್ಲಿನಿಕ್’ ನಗರದ ವಿವಿಧೆಡೆ ಭಾನುವಾರ ಕಾರ್ಯಾರಂಭಗೊಳಿಸಿವೆ.
ಫೀವರ್ ಕ್ಲೀನಿಕ್ (ಸಂಗ್ರಹ ಚಿತ್ರ)
ಫೀವರ್ ಕ್ಲೀನಿಕ್ (ಸಂಗ್ರಹ ಚಿತ್ರ)

ಬೆಂಗಳೂರು: ಕೊರೋನಾ ಸೋಂಕು ಶಂಕಿತರಿಗೆ ತುರ್ತು ತಪಾಸಣೆ ನಡೆಸುವ‘ಫೀವರ್ ಕ್ಲಿನಿಕ್’ ನಗರದ ವಿವಿಧೆಡೆ ಭಾನುವಾರ ಕಾರ್ಯಾರಂಭಗೊಳಿಸಿವೆ.

ಇಲ್ಲಿಯವರೆ ಶಂಕಿತರು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ತೆರಳಿ ತಪಾಸಣೆಗೆ ಒಳಪಡಬೇಕಿತ್ತು. ಇದರಿಂದ ಆಸ್ಪತ್ರೆಯಲ್ಲಿ ಜನಜಂಗುಳಿ ಉಂಟಾಗುತ್ತಿತ್ತು. ಇದನ್ನು ತಡೆಯಲು ಸಲುವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 31 ಫೀವರ್ ಕ್ಲಿನಿಕ್‌ಗಳನ್ನು  ಪ್ರಾರಂಭಿಸಲಾಗಿದೆ.

ಈ ಕ್ಲಿನಿಕ್ ಗಳು ಬೆಳಿಗ್ಗೆ 9ಗಂಟೆಯಿಂದ ಸಂಜೆ 4.30ರ ವರೆಗೆ ಕಾರ್ಯನಿರ್ವಹಿಸುತ್ತಿವೆ. ಜ್ವರ, ಕೆಮ್ಮು, ಶೀತ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗೆ ಪರೀಕ್ಷೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ರೆಫರಲ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಥರ್ಮಲ್ ಸ್ಕ್ರೀನಿಂಗ್ ಮಾಡುವ  ಸೋಂಕು ತಗುಲಿದೆಯೇ ಎನ್ನುವುದನ್ನು ಪತ್ತೆ ಮಾಡಲಾಗುತ್ತದೆ. ಪ್ರತಿ ಕ್ಲಿನಿಕ್‌ಗೂ ವೈದ್ಯಾಧಿಕಾರಿ, ಶುಶ್ರೂಷಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ರೋಗಿಗಳನ್ನು ಪರೀಕ್ಷೆ ಮಾಡುವವರಿಗೆ ಸುರಕ್ಷಾ ಸಾಧನಗಳ (ಪಿಪಿಇ) ಕಿಟ್‌ಗಳನ್ನು ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮೋಹನ್ ಅವರು, ಸರ್ಕಾರದ ನಿರ್ದೇಶನದ ಮೇರೆಗೆ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರದಿಂದ ಫೀವರ್ ಕ್ಲಿನಿಕ್ ಆರಂಭವಾಗಿದ್ದು, ನಗರದಲ್ಲಿ ಯಾರಿಗಾದರೂ ಶೀತ, ನೆಗಡಿ, ಕೆಮ್ಮು, ಜ್ವರ ಕಂಡು  ಬಂದಲ್ಲಿ ತಕ್ಷಣ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಜ್ವರ ಕಾಣಿಸಿಕೊಳ್ಳುವುದು ಕೊರೊನಾ ಲಕ್ಷಣಗಳಲ್ಲಿ ಒಂದಾಗಿದ್ದು, ಫೀವರ್ ಕ್ಲಿನಿಕ್‌ನಲ್ಲಿ ಜ್ವರದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಜ್ವರದ ತೀವ್ರತೆ ಹೆಚ್ಚಿದ್ದಲ್ಲಿ ಐಸೋಲೇಷನ್‌ನಲ್ಲಿ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ಮನೆಗೆ  ಕಳಿಸುತ್ತೇವೆ. ಫೀವರ್ ಕ್ಲಿನಿಕ್ ಆರಂಭಿಸಿರುವ ಕಾರಣ ರೋಗಿಗಳ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಇಲ್ಲಿದೆ ಕ್ಲಿನಿಕ್ ಗಳ ಸಂಪೂರ್ಣ ವಿವರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com