ಕಲಬುರಗಿ: ಮೃತ ವೃದ್ಧನ ಮಗಳು ಕೊರೋನಾ ವೈರಸ್ ನಿಂದ ಗುಣಮುಖ, ವೈದ್ಯಕೀಯ ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ವರದಿ!

ರಾಜ್ಯಾದ್ಯಂತ ತೀವ್ರ ಭೀತಿಗೆ ಕಾರಣವಾಗಿದ್ದ ಕಲಬುರಗಿ ಕೊರೋನಾ ವೈರಸ್ ಪ್ರಕರಣಕ್ಕೆ ಸಂಬಂಧಿಸದಂತೆ ಸಕಾರಾತ್ಮಕ ಸುದ್ದಿಯೊಂದು ಹೊರಬಿದ್ದಿದ್ದು, ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮಗಳು ಇದೀಗ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂದು  ತಿಳಿದುಬಂದಿದೆ.

Published: 30th March 2020 11:55 PM  |   Last Updated: 30th March 2020 11:55 PM   |  A+A-


Kalaburgi corona case

ಕಲಬುರಗಿ ಕೊರೋನಾ ಪ್ರಕರಣ

Posted By : Srinivasamurthy VN
Source : The New Indian Express

ಕಲಬುರಗಿ: ರಾಜ್ಯಾದ್ಯಂತ ತೀವ್ರ ಭೀತಿಗೆ ಕಾರಣವಾಗಿದ್ದ ಕಲಬುರಗಿ ಕೊರೋನಾ ವೈರಸ್ ಪ್ರಕರಣಕ್ಕೆ ಸಂಬಂಧಿಸದಂತೆ ಸಕಾರಾತ್ಮಕ ಸುದ್ದಿಯೊಂದು ಹೊರಬಿದ್ದಿದ್ದು, ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮಗಳು ಇದೀಗ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂದು  ತಿಳಿದುಬಂದಿದೆ.

ಕಳೆದ ಕೆಲವು ವಾರಗಳಿಂದ ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧನ ಮಗಳು ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಇಂದು ಆಕೆಯ ವೈದ್ಯಕೀಯ ವರದಿಯನ್ನು ವೈದ್ಯರು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಆಕೆಗೆ ಸೋಂಕು ಸಂಪೂರ್ಣ ಗುಣಮುಖವಾಗಿದೆ ಎಂದು ಹೇಳಲಾಗಿದೆ.  ಆ ಮೂಲಕ ಕಳೆದ ಹಲವು ವಾರಗಳ ಆಸ್ಪತ್ರೆ ವಾಸವನ್ನು ಆಕೆ ಪೂರ್ಣಗೊಳಿಸಿದ್ದು, ಇನ್ನು ತಮ್ಮ ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿ ಅರೇಬಿಯಾದಿಂದ ಕಲಬುರಗಿಗೆ ವೃದ್ಧ ಫೆಬ್ರವರಿ 29ರಂದು ಬಂದಿದ್ದರು. ಅವರಿಗೆ ಮಾರ್ಚ್‌ 6ರಂದು ಆರೋಗ್ಯದಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗದ ಕಾರಣ ಮಾರ್ಚ್‌ 9ರಂದು ಖಾಸಗಿ ಆಸ್ಪತ್ರೆಗೆ ದಾಖಲು  ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಕೊರೊನಾ ಸೋಂಕಿನಿಂದ ವೃದ್ಧ ಮಾರ್ಚ್‌ 10ರಂದು ಮೃತಪಟ್ಟಿದ್ದರು.ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಕುಟುಂಬದ 4 ಜನ ಸದಸ್ಯರನ್ನು ಇಲ್ಲಿನ ಇ.ಎಸ್.ಐ.ಸಿ ಮೆಡಿಕಲ್ ಅಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. 

4 ಜನ ಪ್ರತ್ರಕರ್ತರೂ ಕ್ವಾರಂಟೈನ್
ಇನ್ನು ಸುದ್ದಿ ನೀಡುವ ಧಾವಂತದಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರ ನೇರ ಸಂಪರ್ಕಕ್ಕೆ ಬಂದಿದ್ದ ನಾಲ್ಕು ಜನ ಪತ್ರಕರ್ತರನ್ನೂ ಕ್ವಾರಂಟೈನ್ ಮಾಡಲಾಗಿತ್ತು.

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp